ಬೆಳಗಾವಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಇತ್ತೀಚಿಗೆ ಕಾಂಗ್ರೆಸ್ ತೆರೆದು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದರು ಇದೀಗ ಬೆಳಗಾವಿಗೆ ಲೋಕಸಭೆ ಚುನಾವಣೆಗೆ ಜಗದೀಶ ಟಾರ್ಗೆ ಬಿಜೆಪಿ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹುಬ್ಬಳ್ಳಿ ಧಾರವಾಡ ಜನತೆ ಶೆಟ್ಟರನ್ನು ಹೊರಹಾಕಿದಕ್ಕೆ ಬೆಳಗಾವಿಗೆ ಬಂದು ನನ್ನ ಕರ್ಮಭೂಮಿ ಎಂದು ಹೇಳಿದರೆ ಸುಮ್ಮನಿರಬೇಕಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು: ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಡಿಕೆಶಿಗೆ ಕೋರ್ಟ್ ಸಮನ್ಸ್
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನನ್ನ ಕರ್ಮಭೂಮಿ ಎಂಬ ಶೆಟ್ಟರ್ ಹೇಳಿಕೆಗೆ ಬಿಜೆಪಿಯಿಂದ ಜಗದೀಶ್ ಶೆಟ್ಟರ್ ಆರು ಬಾರಿ ಆರಿಸಿ ಬಂದಿದ್ದಾರೆ. ಸಿಎಂ ಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೂಡ ಆಗಿದ್ದರು. ಸದ್ಯ ಹುಬ್ಬಳ್ಳಿ ಧಾರವಾಡದ ಜನ ಅವರನ್ನು ಹೊರಗಡೆ ಹಾಕಿದ್ದಾರೆ. ಹೊರಗೆ ಹಾಕಿಸಿಕೊಂಡು ಇಲ್ಲಿ ಬಂದು ಮಾತನಾಡುತ್ತಿದ್ದಾರೆ.ಇದು ನನ್ನ ಕರ್ಮಭೂಮಿ ಅಂದ್ರೆ ಸುಮ್ಮನಿರಬೇಕಾ? ಹುಬ್ಬಳ್ಳಿಗೆ ನನ್ನ ಕರ್ಮಭೂಮಿ ಅಂದ್ರೆ ಅಲ್ಲಿಯ ಜನ ಒಪ್ಪುತ್ತಾರಾ? ನಾವೇನು ಹುಚ್ಚರಿದ್ದೀವಾ? ಎಂದು ಜಗದೀಶ್ ಶೆಟ್ಟರ್ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಾಗ್ದಾಳಿ ನಡೆಸಿದರು.
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅಸ್ತಿಯ ಮೌಲ್ಯ ಎಷ್ಟು ಗೊತ್ತ? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಳಗಾವಿ ಜಿಲ್ಲೆಯ ಜನರನ್ನು ಬಕ್ರ ಮಾಡಲು ಬಂದಿದ್ದಾರಾ? ಅವರ ಕಾರ್ಯಕರ್ತರೇ ಗೋ ಬ್ಯಾಕ್ ಎಂದು ಹೇಳುತ್ತಿದ್ದಾರೆ.ಜಿಲ್ಲೆಯ ಮತ್ತು ಕಾರ್ಯಕರ್ತರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಬೆಳಗಾವಿ ಜಿಲ್ಲೆಗೆ ಜಗದೀಶ್ ಶೆಟ್ಟರ್ ಕೊಡುಗೆ ಏನಿದೆ? ನಾಚಿಕೆ ಆಗಬೇಕು ಎಂದು ಸೇವೆ ಲಕ್ಷ್ಮಿ ಹೆಬ್ಬಾಳ್ಕರ್ ಜಗದೀಶ್ ಶೆಟ್ಟರ್ ವಿರುದ್ಧ ಕಿಡಿ ಕಾರಿದ್ದಾರೆ.
ಕೋವಿಡ್ ವೇಳೆ ಜನರ ಕಷ್ಟಕ್ಕೆ ನಿಂತಿದ್ದು ಡಿ.ಕೆ ಸುರೇಶ್, ಆಗ ಕುಮಾರಸ್ವಾಮಿ ಎಲ್ಲಿದ್ದರು.?- ಡಿಕೆಶಿ ಪ್ರಶ್ನೆ
ಚುನಾವಣೆಗಾಗಿ ಕಾಂಗ್ರೆಸ್ ಕೇಸರಿ ಶಾಲು ಮೊರೆ ಹೋಗಿದೆ ಎಂಬ ಹೇಳಿಕೆಗೆ ಇವೆಲ್ಲ ಚುನಾವಣೆ ವಿಚಾರಗಳೇ ಅಲ್ಲ. ಸಂಸದರು ಯಾರು? ಅವರ ಜವಾಬ್ದಾರಿ ಏನು ಎಂದು ಜನ ತೀರ್ಮಾನಿಸುತ್ತಾರೆ.ಒಂದೇ ವರ್ಷದಲ್ಲಿ ರೂ.1000 ಕೋಟಿ ಅನುದಾನವನ್ನು ತಂದಿದ್ದೇನೆ.ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ.ಸಂಸತ್ತಿನಲ್ಲಿ ಜನರ ಧ್ವನಿಯಾಗಿ ಮಾತನಾಡುವ ನಾಯಕರು ಬೇಕು ಎಂದು ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.