ಬೆಂಗಳೂರು: ನಗರದಲ್ಲಿ ಕಾವೇರಿ ನೀರು ಪೂರೈಕೆ ಮಾಡುವ ತೊರೆಕಾಡನಹಳ್ಳಿ ಪಂಪ್ ಸ್ಟೇಷನ್ ಮುಳುಗಡೆಯಾಗಿದೆ.
ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಪಂಪಿಂಗ್ ಸ್ಟೇಷನ್ ಮುಳುಗಡೆಯಾಗಿದ್ದು, ಎರಡು ದಿನಗಳ ಕಾಲ ಕಾವೇರಿ ನೀರು ಬಂದ್ ಆಗಲಿದೆ. ಮಳವಳ್ಳಿ ಟಿಕೆ ಹಳ್ಳಿ ನೀರು ಸರಬರಾಜು ಘಟಕ ಜಲಾವೃತವಾಗಿದೆ. ಹೀಗಾಗಿ ಯಂತ್ರೋಪಕರಣಗಳು ನೀರಲ್ಲಿ ಮುಳುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ನೀರುನ್ನು ಹಾಕಲು ಸಿಬ್ಬಂದಿ ಪರದಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ಜನರಿಗೆ ಕಾವೇರಿ ನೀರು ಸಿಗುವುದಿಲ್ಲ.