Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM

ಕೆಲವರು ಸದಾ ಹಣ ಉಳಿಸುತ್ತಾರೆ, ಇನ್ನು ಕೆಲವರು ಪ್ರತಿ ತಿಂಗಳೂ ಪರದಾಡುತ್ತಾರೆ! ಯಾಕೀ ವ್ಯತ್ಯಾಸ? ಇಲ್ಲಿದೆ ಹಣಕಾಸು ತಜ್ಞರ ವಿಶ್ಲೇಷಣೆ

06/04/2026 7:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಿವಿಜಿ ಹಾಕಿಕೊಟ್ಟ ಮಾರ್ಗವೇ ಪತ್ರಕರ್ತರ ಸಂಘಟನೆಗೆ ದಾರಿದೀಪ: KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
KARNATAKA

ಡಿವಿಜಿ ಹಾಕಿಕೊಟ್ಟ ಮಾರ್ಗವೇ ಪತ್ರಕರ್ತರ ಸಂಘಟನೆಗೆ ದಾರಿದೀಪ: KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

By kannadanewsnow0917/03/2026 3:49 PM

ಬೆಂಗಳೂರು: ಆಧುನಿಕ ಕನ್ನಡ ಸಾಹಿತ್ಯದ ಸರ್ವಜ್ಞ, ಸಾಹಿತ್ಯ ದಿಗ್ಗಜ ಡಿ.ವಿ.ಗುಂಡಪ್ಪನವರು ಕೇವಲ ಸಾಹಿತಿಯಷ್ಟೇ ಅಲ್ಲದೆ, ಪತ್ರಕರ್ತರ ಹಿತರಕ್ಷಣೆಗಾಗಿ 95 ವರ್ಷಗಳ ಹಿಂದೆಯೇ ಸಂಘಟನೆಯನ್ನು ಕಟ್ಟಿದ ದೂರದರ್ಶಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬಣ್ಣಿಸಿದರು.

ನಗರದಲ್ಲಿ ಬೆಂಗಳೂರು ಜಿಲ್ಲಾ ಘಟಕದ ನೂತನ ಕಚೇರಿ ಪೂಜೆ ಹಾಗೂ ಡಿ.ವಿ.ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂದು ಮೈಸೂರು ರಾಜ್ಯ ಪತ್ರಕರ್ತರ ಸಂಘ, ಇಂದು ಕೆ.ಯು.ಡಬ್ಲ್ಯು.ಜೆ:

ಡಿ.ವಿ.ಜಿ ಅವರು ಅಂದು ಹಾಕಿಕೊಟ್ಟ ಅಡಿಪಾಯದ ಮೇಲೆ ಇಂದು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ ಹೆಮ್ಮರವಾಗಿ ಬೆಳೆದಿದೆ. ಸುಮಾರು 10,000 ಸದಸ್ಯರನ್ನು ಹೊಂದಿರುವ ಇದು ದೇಶದ ಅತಿದೊಡ್ಡ ಸಂಘಟನೆಗಳಲ್ಲಿ ಒಂದಾಗಿದೆ. ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಸಮಿತಿಯ ಶಿಫಾರಸಿನ ಮೇರೆಗೆ ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ಸಂಘಕ್ಕೆ ಮರುನಾಮಕರಣ ಮಾಡಲಾದ ಇತಿಹಾಸವನ್ನು ತಗಡೂರು ಸ್ಮರಿಸಿದರು.

ಬಹುಮುಖ ಪ್ರತಿಭೆಯ ಮೇರು ವ್ಯಕ್ತಿತ್ವ:

ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ (ಕಂದಾಯ)ಸದಸ್ಯ ಕೆ.ಎಚ್. ಅಶ್ವತ್ಥನಾರಾಯಣ ಮಾತನಾಡಿ, ಡಿ.ವಿ.ಜಿ ಅವರು ಪ್ರೌಢಶಾಲೆವರೆಗೆ ಓದಿದ್ದರೂ, ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಅವರು ಹೊಂದಿದ್ದ ಪಾಂಡಿತ್ಯ ಅಪ್ರತಿಮವಾದುದು. ಅವರ “ಮಂಕುತಿಮ್ಮನ ಕಗ್ಗ” ಅಪ್ರತಿಮ ಕೃತಿಯು ಸಮಾಜದ ಪ್ರತಿಯೊಂದು ಸಮಸ್ಯೆಗೆ ಪರಿಹಾರ ನೀಡುವ ಶಕ್ತಿ ಹೊಂದಿವೆ ಎಂದರು.

ಮಂಕುತಿಮ್ಮನ ಕಗ್ಗವೇ ಸಂವಿಧಾನ:

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, “ದೇಶಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಹೇಗೋ, ಪತ್ರಕರ್ತರು ಮತ್ತು ಸಾಮಾನ್ಯ ಜನರ ಬದುಕಿಗೆ ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ ಸಂವಿಧಾನದಂತಿದೆ. ಡಿ.ವಿ.ಜಿ ಅವರು ಎಷ್ಟೇ ಬಡತನವಿದ್ದರೂ ಸರ್ಕಾರದ ಚೆಕ್‌ಗಳನ್ನು ನಗದೀಕರಿಸದೆ ಸ್ವಾಭಿಮಾನಿಯಾಗಿ ಬದುಕಿದ ಆದರ್ಶ ವ್ಯಕ್ತಿತ್ವದವರು,” ಎಂದು ಕೊಂಡಾಡಿದರು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಮಾತನಾಡಿದ, ಹಿರಿಯ ಪತ್ರಕರ್ತ ಭೋಪಯ್ಯ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕರಾದ ಡಿ.ವಿ.ಗುಂಡಪ್ಪನವರ ಹುಟ್ಟುಹಬ್ಬದ ದಿನದಂದೇ ಬೆಂಗಳೂರು ಜಿಲ್ಲಾ ಘಟಕ ಇಂದಿನಿಂದಲೇ ತಮ್ಮ ಕಚೇರಿ ಪೂಜೆ ಮಾಡುವುದರೊಂದಿಗೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದೊಂದಿಗೆ ಕಾರ್ಯಾರಂಭ ಮಾಡಿದೆ. ಇದೊಂದು ಶುಭ ಸೂಚನೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಹಾಗೂ ಬೆಂಗಳೂರು ನಗರ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷರಾದ ಎಸ್.ಸೋಮಶೇಖರ ಗಾಂಧಿ ಸ್ವಾಗತ ಮಾಡಿದರು, ಬೆಂಗಳೂರು ನಗರ ಜಿಲ್ಲೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರವೀಶ್ ವಂದನಾರ್ಪಣೆ ಮಾಡಿದರು.

ನಗರ ಘಟಕ ಕಚೇರಿಯಲ್ಲಿ ಪೂಜೆ:

ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಘಟಕದ ಕಚೇರಿಯಲ್ಲಿ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿದ ನೂತನ ಪದಾಧಿಕಾರಿಗಳು ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು.

BREAKING: 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು: ಕೇಂದ್ರ ಸರ್ಕಾರ ಘೋಷಣೆ | Census 2027

ಮಂಡ್ಯದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ ಕೊರತೆ ಇಲ್ಲ: ಡಿಸಿ ಡಾ.ಕುಮಾರ್ ಮಾಹಿತಿ

Share. Facebook Twitter LinkedIn WhatsApp Email

Related Posts

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM1 Min Read

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM2 Mins Read

ಭಾರತದ ಮೊದಲ ‘ಸೆಲ್ಫಿ ಮಿರರ್’ ಫೋನ್ ರಿಯಲ್‌ಮಿ 16 5G ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

06/04/2026 5:50 PM2 Mins Read
Recent News

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

06/04/2026 7:08 PM

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM

ಕೆಲವರು ಸದಾ ಹಣ ಉಳಿಸುತ್ತಾರೆ, ಇನ್ನು ಕೆಲವರು ಪ್ರತಿ ತಿಂಗಳೂ ಪರದಾಡುತ್ತಾರೆ! ಯಾಕೀ ವ್ಯತ್ಯಾಸ? ಇಲ್ಲಿದೆ ಹಣಕಾಸು ತಜ್ಞರ ವಿಶ್ಲೇಷಣೆ

06/04/2026 7:00 PM

ಐಟಿಆರ್ ಸಲ್ಲಿಸುವವರಿಗೆ ಮುಖ್ಯ ಮಾಹಿತಿ: ಈ ಹಣಕಾಸು ವರ್ಷದಿಂದ ಆದಾಯ ತೆರಿಗೆ ನಿಯಮಗಳಲ್ಲಿ ಪ್ರಮುಖ ಬದಲಾವಣೆ

06/04/2026 6:51 PM
State News
KARNATAKA

ಬೇಸಿಗೆ ದಟ್ಟಣೆ: ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿ ವಿಸ್ತರಣೆ

By kannadanewsnow0906/04/2026 7:08 PM KARNATAKA 1 Min Read

ಬೆಂಗಳೂರು: ಬೇಸಿಗೆಯ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ಕಲಬುರಗಿ ಮತ್ತು ಬೀದರ್ ನಗರಗಳಿಗೆ ಸಂಚರಿಸುವ…

ಕೇಂದ್ರದ ಬಿಜೆಪಿ ಸರ್ಕಾರ ‘ಬಾಕಿ ಸರ್ಕಾರ’; ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಿ: ಕಾಂಗ್ರೆಸ್ MLC ಮಂಜುನಾಥ್ ಭಂಡಾರಿ ಕರೆ

06/04/2026 7:05 PM

ಭಾರತದ ಮೊದಲ ‘ಸೆಲ್ಫಿ ಮಿರರ್’ ಫೋನ್ ರಿಯಲ್‌ಮಿ 16 5G ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

06/04/2026 5:50 PM

ಶಿವಮೊಗ್ಗದಲ್ಲಿ ಆರೋಗ್ಯ ಕ್ರಾಂತಿ: ‘ರಾಯಲ್ ಫಿಟ್‌ನೆಸ್ ಸ್ಟುಡಿಯೋ’ ಮೂಲಕ ನಿಮ್ಮ ಫಿಟ್‌ನೆಸ್ ಕನಸು ನನಸು!

06/04/2026 5:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.