ಬೆಂಗಳೂರು : ರಾಜ್ಯದ ಹಲವಡೆ ರಸಗೊಬ್ಬರ ಅಭಾವ ವಿಚಾರವಾಗಿ ಕೇಂದ್ರ ಗೊಬ್ಬರ ಪೂರೈಕೆ ಮಾಡುವವರೆಗೂ ಈ ಸಮಸ್ಯೆ ಇರುತ್ತದೆ. ಒಂದುವರೆ ಲಕ್ಷ ಬ್ಯಾಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಆಗಬೇಕು ಏನು ಮಾಡಬೇಕು ಅಂತ ನನಗೂ ಗೊಂದಲ ಆಗಿದೆ ನನ್ನ ರಾಜೀನಾಮೆ ಯಾಕೆ ಕೇಳ್ತಾರೆ.? ಎಂದು ಎಸ್ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ರಸಗೊಬ್ಬರ ನೀಡದಿರುವ ಜೆಪಿ ನಡ್ದ ಅವರ ರಾಜೀನಾಮೆ ಕೇಳಲಿ. ವಿಧಾನಸಭೆ ವಿಪಕ್ಷ ನಾಯಕ ಅಶೋಕಗೆ ಆ ತಾಕತ್ ಇದೆಯಾ? ಒಂದುವರೆ ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಬರಬೇಕು ಇದಕ್ಕೆ ಯಾರು ಹೊಣೆ? ಜೆಪಿ ನಡ್ಡಾಗೆ ರಾಜ್ಯದ ಸಮಸ್ಯೆ ಬಗ್ಗೆ ಹರಿಸಲು ಸಮಯ ಕೊಟ್ಟಿಲ್ಲ. ಖಾಸಗಿ ಕಾರ್ಯಕ್ರಮವಾದರೂ 2 ನಿಮಿಷ ಟೈಮ್ ಕೊಡಬಹುದಾಗಿತ್ತು ಅಲ್ವಾ? ಎಂದು ಪ್ರಶ್ನಿಸಿದರು
ದೆಹಲಿಯಲ್ಲಿ ಅಧಿಕೃತ ಭೇಟಿಗೂ ಜೆಪಿ ನಡ್ದ ಅವಕಾಶ ಕೊಡುತ್ತಿಲ್ಲ. ನಾವು ಮೋದಿ ಅವರ ಬಳಿ ರಸಗೊಬ್ಬರ ಕೇಳುವುದು ಸೂಕ್ತವಲ್ಲ. ಬಿಜೆಪಿ ಅವರೇ ಪ್ರತಿ ಗೊಬ್ಬರ ಪೂರೈಸಿ ಅಂತ ಜೆಪಿ ನಡ್ದಾಗಿ ಕೇಳಲಿ ಅಶೋಕಗೆ ಕಾಮನ್ ಸೆನ್ಸ್ ಇಟ್ಟುಕೊಂಡು ಮಾತನಾಡಲು ಹೇಳಿ ಎಂದು ಬೆಂಗಳೂರಿನಲ್ಲಿ ಕೃಷಿ ಸಚಿವ ಎನ್ನುವರಾಯಸ್ವಾಮಿ ವಾಗ್ದಾಳಿ ನಡೆಸಿದರು.