Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!

13/03/2026 7:45 PM

ಮಕ್ಕಳ ಅಪರಾಧಗಳ ಬಗ್ಗೆ ಅರಿವು ಮೂಡಿಸಿ-ಶಿಕ್ಷಣ ನೀಡುವುದು ನಮ್ಮ ಕರ್ತವ್ಯ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

13/03/2026 7:41 PM

BREAKING : ‘ಭಾರತ ನಮ್ಮ ಸ್ನೇಹಿತ’ : ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬರುವ ಹಡಗುಗಳಿಗೆ ‘ಇರಾನ್’ ಅನುಮತಿ

13/03/2026 7:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾವುದೇ ಖಾಸಗಿ ವಾಹನಗಳ ಮೇಲೆ `ರಾಷ್ಟ್ರಧ್ವಜ’ ಹಾರಿಸುವಂತಿಲ್ಲ : ಹೀಗಿದೆ ನಿಯಮಗಳು
KARNATAKA

ಯಾವುದೇ ಖಾಸಗಿ ವಾಹನಗಳ ಮೇಲೆ `ರಾಷ್ಟ್ರಧ್ವಜ’ ಹಾರಿಸುವಂತಿಲ್ಲ : ಹೀಗಿದೆ ನಿಯಮಗಳು

By kannadanewsnow5730/01/2026 9:29 AM

ಬೆಂಗಳೂರು : ಭಾರತದ ರಾಷ್ಟ್ರ ಧ್ವಜವು ಭಾರತದ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ ಮತ್ತು ಇದು ನಮ್ಮ ರಾಷ್ಟ್ರದ ಹೆಮ್ಮೆಯ ಸಂಕೇತವಾಗಿದೆ. ರಾಷ್ಟ್ರ ಧ್ವಜದ ಪ್ರದರ್ಶನ ಮತ್ತು ಬಳಕೆಯನ್ನು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ- 1971 ಮತ್ತು ಭಾರತದ ಧ್ವಜ ಸಂಹಿತೆ- 2002 ರ ಮೂಲಕ ನಿಯಂತ್ರಿಸಲಾಗುತ್ತದೆ. ಸಾರ್ವಜನಿಕರ ಮಾಹಿತಿಗಾಗಿ ಈ ಸಂಹಿತೆಯ ಕೆಲವು ಪ್ರಮುಖ ನಿಯಮಗಳನ್ನು ಪ್ರಕಟಿಸಲಾಗಿದೆ.

ಧ್ವಜ ತಯಾರಿಕೆ ಮತ್ತು ವಸ್ತು ಬಳಕೆ:

ಡಿಸೆಂಬರ್ 30, 2021 ರ ತಿದ್ದುಪಡಿಯ ಪ್ರಕಾರ, ಕೈಯಿಂದ ನೂಲಿದ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ಅಥವಾ ರೇμÉ್ಮ ಖಾದಿ ಬಂಟಿಂಗ್‍ಗಳನ್ನು ಧ್ವಜ ತಯಾರಿಕೆಗೆ ಬಳಸಬಹುದು.

ಪ್ರದರ್ಶನ ಮತ್ತು ಸಮಯ:
ಸಾರ್ವಜನಿಕರು, ಖಾಸಗಿ ಸಂಸ್ಥೆಗಳು ಅಥವಾ ಶಿಕ್ಷಣ ಸಂಸ್ಥೆಗಳು ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಧಕ್ಕೆ ಬಾರದಂತೆ ಎಲ್ಲಾ ದಿನಗಳಲ್ಲಿ ಯಾವುದೇ ಸಂದರ್ಭಗಳಲ್ಲಿ ಧ್ವಜವನ್ನು ಹಾರಿಸಬಹುದು.

ಜುಲೈ 19, 2022 ರ ತಿದ್ದುಪಡಿಯಂತೆ, ಸಾರ್ವಜನಿಕರ ಮನೆಯ ಮೇಲೆ ಅಥವಾ ತೆರೆದ ಸ್ಥಳದಲ್ಲಿ ಪ್ರದರ್ಶಿಸಲಾದ ಧ್ವಜವನ್ನು ಹಗಲು ಮತ್ತು ರಾತ್ರಿ ವೇಳೆ ಹಾರಿಸಲು ಅವಕಾಶವಿದೆ.

ಗಾತ್ರ ಮತ್ತು ವಿನ್ಯಾಸ:
ರಾಷ್ಟ್ರ ಧ್ವಜವು ಆಯತಾಕಾರದಲ್ಲಿರಬೇಕು. ಧ್ವಜವು ಯಾವುದೇ ಗಾತ್ರದ್ದಾಗಿರಬಹುದು, ಆದರೆ ಅದರ ಉದ್ದ ಮತ್ತು ಅಗಲದ ಅನುಪಾತವು 3:2 ರಷ್ಟು ಇರಬೇಕು.

ಗೌರವಯುತ ಪ್ರದರ್ಶನ:
ರಾಷ್ಟ್ರಧ್ವಜವನ್ನು ಯಾವಾಗಲೂ ಗೌರವಯುತ ಮತ್ತು ವಿಶಿಷ್ಟ ಸ್ಥಾನದಲ್ಲಿ ಪ್ರದರ್ಶಿಸಬೇಕು. ಹಾನಿಗೊಳಗಾದ ಅಥವಾ ಅಸ್ತವ್ಯಸ್ತವಾಗಿರುವ ಧ್ವಜವನ್ನು ಪ್ರದರ್ಶಿಸಬಾರದು.

ಯಾವುದೇ ಇತರ ಧ್ವಜ ಅಥವಾ ಬಂಟಿಂಗ್‍ಗಳನ್ನು ರಾಷ್ಟ್ರ ಧ್ವಜಕ್ಕಿಂತ ಎತ್ತರದಲ್ಲಿ ಅಥವಾ ಅದರ ಪಕ್ಕದಲ್ಲಿ ಇರಿಸಬಾರದು. ಒಂದೇ ಧ್ವಜ ಸ್ತಂಭದಲ್ಲಿ ಇತರ ಧ್ವಜಗಳೊಂದಿಗೆ ರಾಷ್ಟ್ರ ಧ್ವಜವನ್ನು ಹಾರಿಸಬಾರದು.

ವಾಹನಗಳ ಮೇಲೆ ಬಳಕೆ:
ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಮತ್ತು ರಾಜ್ಯಪಾಲರಂತಹ ಸಂಹಿತೆಯಲ್ಲಿ ಉಲ್ಲೇಖಿಸಲಾದ ಗಣ್ಯ ವ್ಯಕ್ತಿಗಳ ವಾಹನಗಳನ್ನು ಹೊರತುಪಡಿಸಿ, ಇತರ ಯಾವುದೇ ವಾಹನಗಳ ಮೇಲೆ ಧ್ವಜವನ್ನು ಹಾರಿಸುವಂತಿಲ್ಲ.

ಹೆಚ್ಚಿನ ಮಾಹಿತಿಗಾಗಿ, ಸಾರ್ವಜನಿಕರು ಗೃಹ ಸಚಿವಾಲಯದ ಅಧಿಕೃತ ವೆಬ್‍ಸೈಟ್ www.mha.gov.in ಗೆ ಭೇಟಿ ನೀಡಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

The national flag cannot be flown on any private vehicles: These are the rules
Share. Facebook Twitter LinkedIn WhatsApp Email

Related Posts

ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!

13/03/2026 7:45 PM1 Min Read

ಮಕ್ಕಳ ಅಪರಾಧಗಳ ಬಗ್ಗೆ ಅರಿವು ಮೂಡಿಸಿ-ಶಿಕ್ಷಣ ನೀಡುವುದು ನಮ್ಮ ಕರ್ತವ್ಯ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

13/03/2026 7:41 PM3 Mins Read

ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ: ಸಿಎಂ ಸಿದ್ದರಾಮಯ್ಯ

13/03/2026 6:23 PM1 Min Read
Recent News

ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!

13/03/2026 7:45 PM

ಮಕ್ಕಳ ಅಪರಾಧಗಳ ಬಗ್ಗೆ ಅರಿವು ಮೂಡಿಸಿ-ಶಿಕ್ಷಣ ನೀಡುವುದು ನಮ್ಮ ಕರ್ತವ್ಯ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

13/03/2026 7:41 PM

BREAKING : ‘ಭಾರತ ನಮ್ಮ ಸ್ನೇಹಿತ’ : ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬರುವ ಹಡಗುಗಳಿಗೆ ‘ಇರಾನ್’ ಅನುಮತಿ

13/03/2026 7:05 PM

ಒಮಾನ್‌’ನ ಮಸ್ಕತ್’ನಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಸಾವು, 10 ಮಂದಿಗೆ ಗಾಯ ; ಸರ್ಕಾರ ಮಾಹಿತಿ

13/03/2026 6:36 PM
State News
KARNATAKA

ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!

By kannadanewsnow0913/03/2026 7:45 PM KARNATAKA 1 Min Read

ಬೆಂಗಳೂರು : ವಿಧಾನಸೌಧದ ಎದುರಿಗಿರೋ ಗಾರ್ಡನ್ ‌ನಲ್ಲಿ ಇವತ್ತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌…

ಮಕ್ಕಳ ಅಪರಾಧಗಳ ಬಗ್ಗೆ ಅರಿವು ಮೂಡಿಸಿ-ಶಿಕ್ಷಣ ನೀಡುವುದು ನಮ್ಮ ಕರ್ತವ್ಯ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

13/03/2026 7:41 PM

ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ: ಸಿಎಂ ಸಿದ್ದರಾಮಯ್ಯ

13/03/2026 6:23 PM

ಗುರುವಾರ ರಾಯರ ಅನುಗ್ರಹ ಪಡೆಯಲು ಈ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರ ತಪ್ಪದೇ ಪಠಿಸಿ

13/03/2026 5:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.