ಗದಗ : ಗದಗ ತಾಲೂಕಿನ ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ರಹಸ್ಯ ಇದೀಗ ಬಯಲಾಗಿದೆ. ಜನವರಿ 10 ರಂದು 465 ಗ್ರಾಂ ಚಿನ್ನದ ನಿಧಿ ಪತ್ತೆಯಾಗಿತ್ತು. ರಿತ್ತಿ ಕುಟುಂಬ ಮನೆಯ ಪಾಯ ತೆಗೆಯುವಾಗ ನಿಧಿ ಪತ್ತೆಯಾಗಿತ್ತು. ಪುರಾತನ ನಿಧಿ ದರ ಸುಮಾರು 8 ಕೋಟಿ ಮೌಲ್ಯದಾಗಿದೆ. ಈಗಿನ ಚಿನ್ನದ ದರಕ್ಕೆ ಹೋಲಿಸಿದರೆ 10ಪಟ್ಟು ಹೆಚ್ಚಳವಾಗಿದ್ದು ಕಲ್ಯಾಣ ಚಾಲುಕ್ಯರು ವಿಜಯನಗರ ಅರಸರ ಕಾಲದ ಆಭರಣಗಳು ಇವು ಎಂದು ಸರ್ಕಾರ ರಚಿಸಿದ್ದ ತಜ್ಞರ ತಂಡದಿಂದ ಇದೀಗ ನಿಧಿ ರಹಸ್ಯ ಬಯಲಾಗಿದೆ.
ಆಭರಣಗಳಿಗೆ ಬೆಲೆ ಕಟ್ಟಲು ಆಗಲ್ಲ ಎಂದು ತಜ್ಞರು ತಿಳಿಸಿದ್ದು 500 ರಿಂದ 600 ವರ್ಷಗಳ ಹಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹೆಣ್ಣು ದೇವರಿಗೆ ಹಾಕುವ ಚಿನ್ನದ ಆಭರಣಗಳು ಇವು ಎಂದು ತಜ್ಞರು ತಿಳಿಸಿದ್ದಾರೆ ಗದಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಜ್ಞರ ತಂಡ ಪರಿಶೀಲನೆ ನಡೆಸಿತ್ತು. ಎಂ ಎಸ್ ಕೃಷ್ಣಮೂರ್ತಿ ನೇತೃತ್ವದಲ್ಲಿ ತಜ್ಞರು ಪರಿಶೀಲನೆ ನಡೆಸಿದ್ದರು.
ಎಂಎಸ್ ಕೃಷ್ಣಮೂರ್ತಿ ಪುರಾತತ್ವ ಶಾಸ್ತ್ರಜ್ಞ ಮತ್ತು ಸಮಿತಿಯ ಮುಖ್ಯಸ್ಥರಾಗಿದ್ದಾರೆ ಖಜಾನೆಯಲ್ಲಿ ಇದ್ದ ನಿಧಿ ಹೊರತೆಗೆದು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಅಪರೂಪದ ನೀಲಮಣಿ ಸ್ಪಟಿಕ ಹವಳದಿಂದ ಆಭರಣಗಳನ್ನು ಸಿದ್ಧಪಡಿಸಲಾಗಿದೆ ಒಂದೊಂದು ಆಭರಣ ಫೋಟೋಗ್ರಫಿ ಮಾಡಿ ಅವುಗಳ ವಿನ್ಯಾಸ ಸಂಸ್ಕೃತಿ ಕಲೆಯ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸಿತ್ತು. ಸುಮಾರು 500 ರಿಂದ 600 ವರ್ಷಗಳ ಹಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪತ್ತೆಯಾದ ಆಭರಣಗಳಲ್ಲಿ ಸಿಂಹ ಅಥವಾ ಕೀರ್ತಿ ಮುಖದ ವಿನ್ಯಾಸಗಳು ಕಂಡುಬರುತ್ತಿದ್ದು, ಅವುಗಳನ್ನು ನೋಡಿದಾಗ ಇದು ಹೆಣ್ಣು ದೇವರಿಗೆ ಅರ್ಪಿಸಲು ತಯಾರಿಸಲಾದ ಆಭರಣವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ ಇತಿಹಾಸದ ಹಿನ್ನೆಲೆ ನೋಡಿದಾಗ ಮುಸ್ಲಿಮರ ದಾಳಿಗಳ ಕಾಲದಲ್ಲಿ ಸುರಕ್ಷತೆಗಾಗಿ ಮುಚ್ಚಿಟ್ಟ ಚಿನ್ನವಾಗಿರುವ ಸಾಧ್ಯತೆಯೂ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಪ್ರಜ್ವಲ್ ರಿತ್ತಿ ಎಂಬುವರ ಮನೆಯಲ್ಲಿ 466 ಗ್ರಾಂ ಚಿನ್ನದ ಆಭರಣಗಳು ಸಿಕ್ಕಿದ್ದವು. ಚಿನ್ನದ ಆಭರಣಗಳು ಮತ್ತು ಕೆಲವು ತಾಮ್ರದ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಲಾಗಿತ್ತು. ಇದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸಿತ್ತು. ಆ ನಿಧಿಯು ಸುಮಾರು 300 ವರ್ಷಗಳ ಹಳೆಯದ್ದು ಎಂದು ಆಗ ಪ್ರಾಥಮಿಕವಾಗಿ ಅಂದಾಜಿಸಲಾಗಿತ್ತು. ಈಗ ಈ ಆಭರಣಗಳು 500ರಿಂದ 600 ವರ್ಷ ಹಳೆಯದ್ದು ಎಂದು ತಿಳಿದು ಬಂದಿದೆ.
ಈ ಆಭರಣಗಳಲ್ಲಿ ನೀಲಮಣಿ, ಪಚ್ಚೆ ಹಾಗೂ ಹವಳದಂತಹ ಅಮೂಲ್ಯ ಹರಳುಗಳನ್ನು ಅಳವಡಿಸಲಾಗಿದ್ದು, ಅವುಗಳ ಕಲಾತ್ಮಕತೆ ವಿಶೇಷವಾಗಿದೆ. ಪತ್ತೆಯಾದ ಚಿನ್ನದ ತೂಕ ಸುಮಾರು 470 ಗ್ರಾಂ ಆಗಿದ್ದು, ಇಂದಿನ ಮಾರುಕಟ್ಟೆಯ ಬೆಲೆ ಪ್ರಕಾರ ಅದರ ಮೌಲ್ಯ ಸುಮಾರು 80 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.








