ಬೆಂಗಳೂರು: ಬಿ.ಡಿ.ಎ.ದಿಂದ ಮೇಜರ್ ಆರ್ಟೀರಿಯಲ್ ರಸ್ತೆಯ ತ್ರಿಪಥ ಯೋಜನೆ(3-ಲೇನಿಂಗ್) ಕಾಮಗಾರಿಗೆ ಸಂಬಂಧಿಸಿದಂತೆ ಹೆಜ್ಜಾಲ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಗೆ ಅನುಮತಿ ನೀಡಿರುವುದರಿಂದ ಈ ಕೆಳಕಂಡ ರೈಲು ಸೇವೆಗಳನ್ನು ಅವುಗಳ ಮುಂದೆ ನೀಡಲಾಗಿರುವ ವಿವರದಂತೆ ರದ್ದುಗೊಳಿಸಲಾಗುವುದು/ಭಾಗಶಃ ರದ್ದುಗೊಳಿಸಲಾಗುವುದು/ನಿಯಂತ್ರಿಸಲಾಗುವುದು ಎಂಬುದಾಗಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರನೀಶ್ ಕೆ.ಎನ್ ತಿಳಿಸಿದ್ದಾರೆ.
ರೈಲುಗಳ ರದ್ದತಿ:
1. ರೈಲು ಸಂಖ್ಯೆ 56265 ಅರಸೀಕೆರೆ-ಮೈಸೂರು ಪ್ಯಾಸೆಂಜರ್ ಸೇವೆಯನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಹಾಗೂ ದಿನಾಂಕ 26.03.2026 ರಂದು ರದ್ದುಗೊಳಿಸಲಾಗುವುದು.
2. ರೈಲು ಸಂಖ್ಯೆ 56266 ಮೈಸೂರು-ಅರಸೀಕೆರೆ ಪ್ಯಾಸೆಂಜರ್ ಸೇವೆಯನ್ನು ದಿನಾಂಕ 28.11.2025, ದಿನಾಂಕ 05.12.2025, ದಿನಾಂಕ 23.01.2026, ದಿನಾಂಕ 30.01.2026, ದಿನಾಂಕ 06.02.2026 ಮತ್ತು ದಿನಾಂಕ 27.03.2026 ರಂದು ರದ್ದುಗೊಳಿಸಲಾಗುವುದು
3. ರೈಲು ಸಂಖ್ಯೆ 06269 ಮೈಸೂರು–ಎಸ್.ಎಂ.ವಿ.ಟಿ. ಬೆಂಗಳೂರು ಪ್ಯಾಸೆಂಜರ್ ಸೇವೆಯನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಮತ್ತು ದಿನಾಂಕ 26.03.2026 ರಂದು ರದ್ದುಗೊಳಿಸಲಾಗುವುದು
4. ರೈಲು ಸಂಖ್ಯೆ 06270 ಎಸ್.ಎಂ.ವಿ.ಟಿ. ಬೆಂಗಳೂರು–ಮೈಸೂರು ಪ್ಯಾಸೆಂಜರ್ ಸೇವೆಯನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಮತ್ತು ದಿನಾಂಕ 26.03.2026 ರಂದು ರದ್ದುಗೊಳಿಸಲಾಗುವುದು.
5. ರೈಲು ಸಂಖ್ಯೆ 66535 ಕೆಎಸ್ಆರ್ ಬೆಂಗಳೂರು – ಚನ್ನಪಟ್ಟಣ ಮೆಮು ರೈಲು ಸೇವೆಯನ್ನು ದಿನಾಂಕ 28.11.2025, ದಿನಾಂಕ 05.12.2025, ದಿನಾಂಕ 23.01.2026, ದಿನಾಂಕ 30.01.2026, ದಿನಾಂಕ 06.02.2026 ಮತ್ತು ದಿನಾಂಕ 27.03.2026 ರಂದು ರದ್ದುಗೊಳಿಸಲಾಗುವುದು.
ರೈಲುಗಳ ಭಾಗಶಃ ರದ್ದತಿ:
1. ರೈಲು ಸಂಖ್ಯೆ 06526 ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು ಮೆಮು ರೈಲು ಸಂಚಾರವನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಮತ್ತು ದಿನಾಂಕ 26.03.2026 ರಂದು ಚನ್ನಪಟ್ಟಣ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.
2. ರೈಲು ಸಂಖ್ಯೆ 16022 ಅಶೋಕಪುರಂ – ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ಸಂಚಾರವನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಮತ್ತು ದಿನಾಂಕ 26.03.2026 ರಂದು ಅಶೋಕಪುರಂ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.
3. ರೈಲು ಸಂಖ್ಯೆ 66580 ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು ಮೆಮು ಸಂಚಾರವನ್ನು ದಿನಾಂಕ 27.11.2025, ದಿನಾಂಕ 04.12.2025, ದಿನಾಂಕ 22.01.2026, ದಿನಾಂಕ 29.01.2026, ದಿನಾಂಕ 05.02.2026 ಮತ್ತು ದಿನಾಂಕ 26.03.2026 ರಂದು ರಾಮನಗರ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.
4. ರೈಲು ಸಂಖ್ಯೆ 66579 ಕೆಎಸ್ಆರ್ ಬೆಂಗಳೂರು – ಅಶೋಕಪುರಂ ಮೆಮು ರೈಲು ದಿನಾಂಕ 28.11.2025, ದಿನಾಂಕ 05.12.2025, ದಿನಾಂಕ 23.01.2026, ದಿನಾಂಕ 30.01.2026, ದಿನಾಂಕ 06.02.2026 ಮತ್ತು ದಿನಾಂಕ 27.03.2026 ರಂದು ಕೆಎಸ್‌ಆರ್ ಬೆಂಗಳೂರು ಮತ್ತು ರಾಮನಗರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ಈ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಬದಲಾಗಿ ರಾಮನಗರ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುವುದು.
5. ರೈಲು ಸಂಖ್ಯೆ 16227 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ದಿನಾಂಕ 04.12.2025 ಮತ್ತು ದಿನಾಂಕ 05.02.2026 ರಂದು ಮೈಸೂರು ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ಈ ರೈಲು ಮೈಸೂರು ನಿಲ್ದಾಣದ ಬದಲಾಗಿ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುವುದು.
ರೈಲುಗಳ ನಿಯಂತ್ರಣ:
1. ದಿನಾಂಕ 04.12.2025 ಮತ್ತು 05.02.2026 ರಂದು ಹೊರಡುವ ರೈಲು ಸಂಖ್ಯೆ 16021 ಎಂಜಿಆರ್ ಚೆನ್ನೈ ಸೆಂಟ್ರಲ್ – ಅಶೋಕಪುರಂ ಎಕ್ಸ್‌ಪ್ರೆಸ್ ಸಂಚಾರವನ್ನು ಮಾರ್ಗ ಮಧ್ಯದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
GOOD NEWS: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ‘ಕಂಪ್ಯೂಟರ್ ಶಿಕ್ಷಣ’: ಸಚಿವ ಮಧು ಬಂಗಾರಪ್ಪ ಘೋಷಣೆ
ಹೊಸ ಕಾರ್ಮಿಕ ಕಾನೂನುಗಳು 77 ಲಕ್ಷ ಉದ್ಯೋಗ ಸೃಷ್ಟಿ, ನಿರುದ್ಯೋಗ ಕಡಿಮೆ ಮಾಡಲಿದೆ: ವರದಿ | New Labour laws








