ಕಾಬೂಲ್ : ಅಫ್ಘಾನಿಸ್ತಾನವನ್ನ ತಾಲಿಬಾನ್ ವಶಪಡಿಸಿಕೊಂಡ ನಂತ್ರ ಪರಿಸ್ಥಿತಿ ತುಂಬಾ ಕರುಣಾಜನಕ ಮತ್ತು ಸವಾಲಿನಿಂದ ಕೂಡಿದೆ. ಬಾಲ್ಖ್ ಪ್ರಾಂತ್ಯದಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಇಲ್ಲಿ ಬಡತನದಿಂದ ಬಳಲುತ್ತಿರುವ ಕುಟುಂಬವು ತಮ್ಮ ಮಗುವನ್ನ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಮುಂದಾಗಿದೆ. ಹೌದು, ಇಲ್ಲಿನ ಕುಟುಂಬವೊಂದು ಎರಡು ವರ್ಷದ ಮಗುವನ್ನ ಮಾರಾಟ ಮಾಡಲು ಹೊರಟಿತ್ತು. ಆದ್ರೆ, ಅದನ್ನ ರಕ್ಷಿಸಲಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ಆರ್ಥಿಕ ಕಾರಣಗಳಿಗಾಗಿ ಅಫ್ಘಾನಿಸ್ತಾನದಲ್ಲಿ ಮಕ್ಕಳನ್ನ ಮಾರಾಟ ಮಾಡುವ ಮೊದಲ ಪ್ರಕರಣ ಇದಲ್ಲ. ಕಳೆದ ವರ್ಷ, ತಮ್ಮ ಮಗುವನ್ನ ಕೆಲವು ರೂಪಾಯಿಗಳಿಗೆ ಮಾರಾಟ ಮಾಡಲು ಸಿದ್ಧರಿರುವ ಕುಟುಂಬಗಳ ಬಗ್ಗೆ ಹಲವಾರು ವರದಿಗಳು ಬಂದಿದ್ದವು.
ವರದಿಯ ಪ್ರಕಾರ, ಈ ವಿಷಯ ಬೆಳಕಿಗೆ ಬಂದ ನಂತ್ರ ಸ್ಥಳೀಯರು ತಮ್ಮ ಮಗುವನ್ನ ಮಾರಾಟ ಮಾಡಬೇಕಾಗಿಲ್ಲ ಎಂದು ಕುಟುಂಬಕ್ಕೆ ಆಹಾರ ಮತ್ತು ಇತರ ಸಹಾಯವನ್ನ ನೀಡಿದರು. ತೀವ್ರ ಬಡತನವು ತನ್ನ ಮಗುವನ್ನ ಮಾರಾಟ ಮಾಡಲು ಬಲವಂತಪಡಿಸಿತು ಎಂದು ಮಗುವಿನ ತಾಯಿ ನಸ್ರೀನ್ ಹೇಳಿದ್ದಾರೆ ಎಂದು ವರದಿ ಮಾಡಿದೆ. “ನಾನು ಕಠಿಣ ಪರಿಸ್ಥಿತಿಯನ್ನ ಎದುರಿಸುತ್ತಿದ್ದೇನೆ. ತಿನ್ನಲು ಮತ್ತು ಇಂಧನವಾಗಿ ಬಳಸಲು ಏನೂ ಇಲ್ಲ. ಚಳಿಗಾಲಕ್ಕಾಗಿ ನಾನು ಯಾವುದೇ ಸಿದ್ಧತೆಗಳನ್ನ ಮಾಡಿಕೊಂಡಿಲ್ಲ. ಚಳಿಗಾಲಕ್ಕಾಗಿ ಕೆಲವು ವಸ್ತುಗಳನ್ನು ಪಡೆಯಲು ನಾನು ನನ್ನ ಹೆಣ್ಣುಮಗುವನ್ನ ಮಾರಾಟ ಮಾಡಬೇಕಾಗುತ್ತದೆ ಎಂದು ನಸ್ರೀನ್ ಹೇಳಿದರು.
ಸ್ಥಳೀಯ ಸರ್ಕಾರವಾಗಲಿ ಅಥವಾ ಮಾನವೀಯ ಏಜೆನ್ಸಿಗಳಾಗಲಿ, ಒಂದು ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ ಯಾರೂ ಸಹಾಯ ಮಾಡಿಲ್ಲ ಎಂದು ನಸ್ರೀನ್ ಹೇಳಿದರು. “ನಾನು ಸ್ವತಃ ಎರಡರಿಂದ ಮೂರು ಬಾರಿ ಅಧಿಕಾರಿಗಳ ಬಳಿಗೆ ಹೋಗಿ ಸಹಾಯ ಪಡೆಯುವವರ ಪಟ್ಟಿಯಲ್ಲಿ ನನ್ನ ಹೆಸರನ್ನ ಸೇರಿಸುವಂತೆ ಮನವಿ ಮಾಡಿದ್ದೇನೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನ ಬರೆಯಲಾಗಿದೆ, ಆದರೆ ಇಲ್ಲಿಯವರೆಗೆ ನನಗೆ ಯಾವುದೇ ಸಹಾಯ ಸಿಕ್ಕಿಲ್ಲ’ ಎಂದರು.
ಕಳೆದ ವರ್ಷ ತಾಲಿಬಾನ್ ಕಾಬೂಲ್ ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಜನರ ಜೀವನವು ಹದಗೆಟ್ಟಿದೆ. ವಿಶ್ವ ಆಹಾರ ಕಾರ್ಯಕ್ರಮವು ಆರ್ಥಿಕ ಬಿಕ್ಕಟ್ಟು ಮತ್ತು ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ತಾಲಿಬಾನ್ ಅಫ್ಘಾನಿಸ್ತಾನದ ಮಹಿಳೆಯರು ಮತ್ತು ಬಾಲಕಿಯರ ಮಾನವ ಹಕ್ಕುಗಳನ್ನ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಗುರುವಾರ ನಿರ್ಣಯವನ್ನ ಅಂಗೀಕರಿಸಿದೆ. ತಾಲಿಬಾನ್ ಪ್ರಾತಿನಿಧಿಕ ಸರ್ಕಾರವನ್ನ ಸ್ಥಾಪಿಸಲು ಮತ್ತು ದೇಶವನ್ನ “ಗಂಭೀರ ಆರ್ಥಿಕ, ಮಾನವೀಯ ಮತ್ತು ಸಾಮಾಜಿಕ ಪರಿಸ್ಥಿತಿಗೆ” ಒಳಪಡಿಸುವಲ್ಲಿ ವಿಫಲವಾಗಿದೆ ಎಂದು ಅದು ಆರೋಪಿಸಿದೆ.
BREAKING NEWS : ಪಾಕ್ ಮಣಿಸಿ 2ನೇ ಬಾರಿ ‘ಟಿ20 ವಿಶ್ವಕಪ್’ ಗೆದ್ದಇಂಗ್ಲೆಂಡ್ |T20 world cup
BIGG NEWS : ಇದೆಂತ ಪ್ರತಿಭಟನೆ ಸ್ವಾಮಿ.? ; ‘ಟಿಕೆಟ್’ ನೀಡ್ಲಿಲ್ಲ ಅಂತಾ ‘ಟವರ್’ ಹತ್ತಿದ ಆಪ್ ಮುಖಂಡ