ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತವು ಅನೇಕ ಸಂಪ್ರದಾಯಗಳಿಗೆ ತವರು. ವಿವಿಧ ಸಂಸ್ಕೃತಿಗಳ ಸಮ್ಮಿಲನ. ಈಗ ವಿದೇಶಿ ಸಂಸ್ಕೃತಿಗೆ ಒಗ್ಗಿಕೊಂಡಿರುವ ಜನರು ನಮ್ಮ ದೇಶದ ಆಚಾರ-ವಿಚಾರಗಳನ್ನ ಮರೆಯುತ್ತಿದ್ದಾರೆ. ಅದ್ರಂತೆ, ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿಯಾಗುತ್ತಿದ್ದು, ಇದು ಮುಂದುವರಿದ್ರೆ ಮುಂದಿನ ಪೀಳಿಗೆ ಬದುಕುವುದು ಕಷ್ಟ. ಹೀಗಾಗಿ ತನ್ನ ಮಗಳ ಮದುವೆಯನ್ನ ವಿನೂತನವಾಗಿ ಮಾಡಲು ಯೋಚಿಸಿದ ರೈತನೊಬ್ಬ, ಪ್ಲಾಸ್ಟಿಕ್ ಬಳಸದೆ, ಸಂಪೂರ್ಣ ಸಾಂಪ್ರದಾಯಿಕ ರೀತಿಯಲ್ಲಿ ಪರಿಸರ ಸ್ನೇಹಿ ವಿವಾಹ ನಡೆಸಿದ್ದಾರೆ.
ವಿಪುಲ್ ಪಟೇಲ್ ಗುಜರಾತ್ನ ಸೂರತ್ನ ರೈತ.. ಮಗಳು ರಿದ್ಧಿಯ ಮದುವೆಯನ್ನ ಎಲ್ಲರಂತೆ ಅದ್ಧೂರಿಯಾಗಿ ಮಾಡಬೇಕೆಂದು ಅವ್ರು ಬಯಸಿದ್ದರು. ಆದ್ರೆ, ಈ ಮದುವೆಯ ಮೂಲಕ ಜನರಿಗೆ ಸಂದೇಶ ನೀಡಲು ಬಯಸಿದ್ದರು. ಅದಕ್ಕಾಗಿ ಮದುವೆಯನ್ನ ಸಾಂಪ್ರದಾಯಿಕವಾಗಿ ಪರಿಸರ ಸ್ನೇಹಿಯಾಗಿ ನಡೆಸಬೇಕು ಎಂದು ಯೋಚಿಸಿದರು. ಮದುವೆಯ ಆಮಂತ್ರಣ ಪತ್ರಗಳಿಂದ ಈ ನೀತಿಯನ್ನ ಅನುಸರಿಸಲು ಅವರು ನಿರ್ಧರಿಸಿದರು. ಅದ್ರಂತೆ, ತುಳಸಿ ಬೀಜಗಳೊಂದಿಗೆ ಮದುವೆ ಆಮಂತ್ರಣ ಪತ್ರಗಳನ್ನ ಸಂಬಂಧಿಕರಿಗೆ ನೀಡಿ, ಈ ಬೀಜಗಳನ್ನ ಮಣ್ಣಿನಲ್ಲಿ ನೆಡಲು ಹೇಳಿದರು.
ವಿಪುಲ್ ಪಟೇಲ್ ಅವ್ರು ಮದುವೆ ಸಂದರ್ಭದಲ್ಲಿ ವಧುವನ್ನ ಎತ್ತಿನ ಬಂಡಿಯಲ್ಲಿ ಮಂಟಪಕ್ಕೆ ಕರೆತರುವ ವ್ಯವಸ್ಥೆ ಮಾಡಿದರು. ಮಗಳ ಹಸುಳೆಯಲ್ಲಿ ಗಿರ್ ತಳಿಯ ಹಸುವನ್ನ ಉಡುಗೊರೆಯಾಗಿ ನೀಡಲಾಗಿತ್ತು. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದ ಉತ್ಪನ್ನಗಳಿಂದಲೇ ಖಾದ್ಯಗಳನ್ನ ಸಿದ್ಧಪಡಿಸಿದರು. ಅವರು ಯಾವುದೇ ರಾಸಾಯನಿಕಗಳನ್ನ ಹೊಂದಿರದ ಭಕ್ಷ್ಯಗಳೊಂದಿಗೆ ಔತಣವನ್ನ ಸಿದ್ಧಪಡಿಸಿದರು. ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸದೇ ಸಂಭ್ರಮಿಸಿದರು. ವಿಪುಲ್ ಪಟೇಲ್ ಅವ್ರು ತಿನ್ನುವ ಲೋಟಗಳು, ನೀರಿನ ಲೋಟಗಳು ಸೇರಿದಂತೆ ಪ್ರತಿಯೊಂದು ಸಣ್ಣ ವಿಷಯವನ್ನೂ ನೋಡಿಕೊಂಡರು. ಅವರು ಮರುಬಳಕೆ ಮಾಡಬಹುದಾದ ವಸ್ತುಗಳನ್ನ ಮಾತ್ರ ಬಳಸಿದ್ರು. ವಿಪುಲ್ ಪಟೇಲ್ ಅವರ ಈ ಪ್ರಯತ್ನವನ್ನ ಮದುವೆಗೆ ಆಗಮಿಸಿದ್ದ ಎಲ್ಲಾ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಶ್ಲಾಘಿಸಿದರು.
ವಿಪುಲ್ ಪಟೇಲ್ ಸ್ನೇಹಿತ ಜೈದೀಪ್ ಪಟೇಲ್, “ವಿಪುಲ್ ಪಟೇಲ್ ನನ್ನ ಸ್ನೇಹಿತ. ಖಾದ್ಯಗಳ ಸಂಪೂರ್ಣ ಮೆನುವನ್ನ ರಾಸಾಯನಿಕಗಳಿಲ್ಲದೇ ಸಾವಯವ ಎಂದು ನಾವು ವ್ಯವಸ್ಥೆ ಮಾಡಿದ್ದೇವೆ. ನಾವು ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ನಾವು ನೀರಿನ ಗ್ಲಾಸ್ಗಳನ್ನ ಕೂಡ ಪ್ಲಾಸ್ಟಿಕ್ ಬಳಸಿಲ್ಲ, ಕೇವಲ ಪೇಪರ್ ಕಪ್ಗಳಾಗಿದ್ವು” ಎಂದಿದ್ದಾರೆ.
BIGG NEWS : ಮೂಡಿಗೆರೆಯಲ್ಲಿ ಐದು ಸಾಕಾನೆಗಳ ಮೂಲಕ ಒಂದು ‘ಪುಂಡಾನೆ’ ಸೆರೆಗೆ ಕಾರ್ಯಾಚರಣೆ
BIGG NEWS: ಕೋಲಾರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ವರುಣನ ಆರ್ಭಟಕ್ಕೆ ಮನೆಗಳ ಚಾವಣಿ, ಗೋಡೆ ಕುಸಿತ
ರಾಜ್ಯದಲ್ಲಿ ಅವಧಿಗೆ ಮುನ್ನವೇ ವಿಧಾನಸಭಾ ಚುನಾವಣೆ ನಡೆಯುವುದಿಲ್ಲ – ಸಚಿವ ಅಶ್ವತ್ಥನಾರಾಯಣ