ಗದಗ: ಕಳೆದ ಎರೆಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೂ ಕೂಡ ಮಳೆ ನಿಂತರೂ ಅವಾಂತರ ನಿಂತಿಲ್ಲ. ನಿರಂತರ ಸುರಿದ ಭಾರಿ ಮಳೆಗೆ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಇದರಿಂದ ಭೂಮಿ ಕುಸಿಯುತ್ತಿದೆ.
BIGG NEWS: ಆನಂದ ಮಾಮನಿ ರಾಜಕೀಯ ಕ್ಷೇತ್ರದಲ್ಲಿ ನಡೆದು ಬಂದ ಹಾದಿ ಹೇಗಿತ್ತು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಜೊತೆಗೆ ಜನರ ನೆಮ್ಮದಿ ಕೂಡ ಕಡಿಮೆಯಾಗುತ್ತಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಈ ಬಡ ಕುಟುಂಬ ಭೂಕುಸಿತದಿಂದ ಕಂಗಾಲಾಗಿದೆ. ಮನೆಯಲ್ಲಿ ಏಕಾಏಕಿ ಭೂಕುಸಿತದಿಂದ ಪಕ್ಕದಲ್ಲೇ ಮಲಗಿದ್ದ ತಂದೆ, ಮಗು ಬಚಾವ್ ಆಗಿದ್ದಾರೆ. ಈ ಸುದ್ದಿ ಕೇಳಿ ನೋಡಲು ಜನರು ಜಮಾಯಿಸಿದ್ದರು. ಈ ಘಟನೆ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಳ್ಳಂಬೆಳಗ್ಗೆ ಇಡೀ ಕುಟುಂಬ ಹೌಹಾರಿತ್ತು. ಮಲಗಿದ ಮನೆಯಲ್ಲೇ ಭಾರಿ ಸದ್ದು ಕೇಳಿ ಬಂದಿತ್ತು. ನೋಡು ನೋಡುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಭೂಕುಸಿತವಾಗಿತ್ತು. ಅಷ್ಟೇ ಅಲ್ಲ ಭೂಕುಸಿತದ ಪಕ್ಕದಲ್ಲೇ ಮಲಗಿದ ತಂದೆ, ಪುಟ್ಟ ಮಗು ಅದೃಷ್ಠವಶಾತ್ ಬಚಾವ್ ಆಗಿದ್ದರು. ಈ ಭೂಕುಸಿತ ಘಟನೆ ನಡೆದಿದೆ.