ಕಾರವಾಡ : ಇಲಿ ಬಿದ್ದಿದ್ದ ಸಾಂಬಾರನ್ನೇ ಮಕ್ಕಳಿಗೆ ಬಡಿಸಿದ ಪರಿಣಾಮ ಮಕ್ಕಳು ಅಸ್ವಸ್ಥರಾದ ಘಟನೆ ಮುಂಡಗೋಡ ಪಟ್ಟಣದ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದು, ಅಡುಗೆ ಸಹಾಯಕರು ನಿರ್ಲಕ್ಷ್ಯ ತೋರಿ ಇಲಿ ಬಿದ್ದಿದ್ದ ಸಾಂಬಾರನ್ನೇ ಮಕ್ಕಳಿಗೆ ಬಡಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು, , ಅಡುಗೆ ಸಹಾಯಕರ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂಬಾರಿಗೆ ಬಿದ್ದ ಇಲಿಯನ್ನು ವಿದ್ಯಾರ್ಥಿಗಳಿಂದ ತೆಗೆಯಿಸಿ ಅದೇ ಸಾಂಬಾರನ್ನು ಮಕ್ಕಳಿಗೆ ಅಡುಗೆ ಸಹಾಯಕರು ಬಡಿಸಿದ್ದಾರೆ ಎನ್ನಲಾಗಿದ್ದು, ಈ ವಿಚಾರವನ್ನು ಯಾರ ಹತ್ತಿರ ಕೂಡ ಹೇಳದಂತೆ ಮಕ್ಕಳಿಗೆ ಸೂಚನೆ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇಲಿ ಬಿದ್ದಿದ್ದ ಸಾಂಬಾರು ಸೇವಿಸಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ದುರಂತ ತಪ್ಪಿದೆ.
ವನ್ಯಜೀವಿ ಅಕ್ರಮ ಸಾಕಾಣಿಕೆ ಆರೋಪ : ‘ಕೈ’ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಬಂಧನಕ್ಕೆ ಬಿಜೆಪಿ ಆಗ್ರಹ
ಸಿಎಂ ಬೊಮ್ಮಾಯಿಯನ್ನು ಹೈಕಮಾಂಡ್ ಕೀ ಕೊಟ್ಟು ಕುಣಿಸುತ್ತಿದೆ: ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ