ಬೆಂಗಳೂರು: ರಾಜ್ಯದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಮುಕ್ತಾಯಗೊಂಡಿದೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
BREAKING NEWS :ಮಕ್ಕಳು ಆಟವಾಡುತ್ತಿದ್ದ ವೇಳೆ ನಾಡಬಾಂಬ್ ಸ್ಪೋಟ : ಒಂದು ಮಗು ಸಾವು, ಮೂವರು ಮಕ್ಕಳಿಗೆ ಗಂಭೀರ ಗಾಯ
ಈ ವೇಳೆ ಅವರು ಮಾತನಾಡಿದ, ಭಾರತ್ ಜೋಡೋ ಯಾತ್ರೆ ಕೇವಲ ಯಾತ್ರೆಯಾಗಿ ಉಳಿದುಕೊಂಡಿಲ್ಲ. ಐಕ್ಯತಾ ಯಾತ್ರೆ ಈಗ ಆಂದೋಲನವಾಗಿ ಮಾರ್ಪಟ್ಟಿದೆ. ದೇಶದ ರಾಜಕಾರಣವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಾಗ್ತಿದೆ. ಈ ಹಿಂದೆ ಇಂದಿರಾ ಗಾಂಧಿ ನೋಡಲು ಲಕ್ಷಾಂತರ ಜನ ಬಂದಿದ್ರು. ಇಂದು ರಾಹುಲ್ ಗಾಂಧಿ ನೋಡಲು ಅಪಾರ ಜನ ಬಂದಿದ್ರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
BREAKING NEWS :ಮಕ್ಕಳು ಆಟವಾಡುತ್ತಿದ್ದ ವೇಳೆ ನಾಡಬಾಂಬ್ ಸ್ಪೋಟ : ಒಂದು ಮಗು ಸಾವು, ಮೂವರು ಮಕ್ಕಳಿಗೆ ಗಂಭೀರ ಗಾಯ
ರಾಹುಲ್ ಗಾಂಧಿಯವರದ್ದು ಸ್ಪಷ್ಟವಾದ ಗುರಿ, ದಿಟ್ಟವಾದ ನಡಿಗೆ. ಒಂದೆರಡು ದಿನ ಸ್ಪಲ್ಪ ಕಸಿವಿಸಿ ಆಯ್ತು, ಆಮೇಲೆ ನಾವು ಅದಕ್ಕೆ ಅಡ್ಜಸ್ಟ್ ಆಗಬೇಕಾಯ್ತು. ಬೆಳಗ್ಗೆ ಸ್ವಲ್ಪ ಲೇಟ್ ಆಗಿ ಯಾತ್ರೆ ಶುರು ಮಾಡೋಣ ಅಂದಾಗ ಅದಕ್ಕೆ ಅವರು ಒಪ್ಪಲಿಲ್ಲ. ಶಿರಾದಲ್ಲಿ ಸ್ವಲ್ಪ ರೂಟ್ ಚೇಂಜ್ ಮಾಡಲು ಪ್ರಯತ್ನ ಮಾಡಿದರೂ ಒಪ್ಪಲಿಲ್ಲ ಎಂದು ರಾಹುಲ್ ಗಾಂಧಿ ‘ಮಾರ್ಗದರ್ಶನ’ ಬಗ್ಗೆ ಹೇಳಿದರು.