ರಾಯಚೂರು: ಜೆಡಿಎಸ್ ಗೆ ಯಾರು ಹೈಕಮಾಂಡ್ ಇಲ್ಲ, ಜನರೇ ನಮಗೆ ಹೈಕಮಾಂಡ್ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
BREAKING NEWS: ಬೆಳಗಾವಿ ಚಳಿಗಾಲದ ಅಧಿವೇಶನ ನಾಳೆಯೇ ಮುಕ್ತಾಯಗೊಳ್ಳುವ ಸಾಧ್ಯತೆ?
ನಗರದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಬಸವರಾಜ ಬೊಮ್ಮಾಯಿ ಅಧಿಕಾರವಿಲ್ಲದ ಮುಖ್ಯಮಂತ್ರಿ, ಕೇಶವಕೃಪದ ಅಣತೆಯಂತೆ ಅಧಿಕಾರ ಚಲಾವಣೆ ನಡೆಯುತ್ತಿದೆ ಎಂದರು. ತೆಲಂಗಾಣದಲ್ಲಿ ಚಂದ್ರಶೇಖರ್ ನಾಲ್ಕು ವರ್ಷದಲ್ಲಿ ನೀರಾವರಿ ಮುಗಿಸಿದ್ರು. 26 ಜನ ಎಂಪಿಗಳು ಕೂಳಿಗೆ ಭಾರವಾಗಿದ್ದಾರೆ. ಮೋದಿ ಮತ್ತು ಅಮಿತ್ ಶಾ ವಿರುದ್ಧ ಮಾತನಾಡುವ ನೈತಿಕತೆ ನಮ್ಮ ಎಂಪಿಗಳಿಗೆ ಇಲ್ಲ ಅಂತ ಲೇವಡಿ ಮಾಡಿದರು ಎಂದು ಹೇಳಿದ್ದಾರೆ.
BREAKING NEWS: ಬೆಳಗಾವಿ ಚಳಿಗಾಲದ ಅಧಿವೇಶನ ನಾಳೆಯೇ ಮುಕ್ತಾಯಗೊಳ್ಳುವ ಸಾಧ್ಯತೆ?
ನಾವು 2023ರ ಚುನಾವಣೆಗಾಗಿ ಜನರ ಮುಂದೆ ಹೋಗುತ್ತಿದ್ದೇವೆ. ರಾಜ್ಯದ ಹಲವು ಕಡೆ ನಾವು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಜನವರಿ ತಿಂಗಳಲ್ಲಿ ಬೇರೆ ಪಕ್ಷದವರು ನಮ್ಮ ಪಕ್ಷಕ್ಕೆ ಬರುತ್ತಾರೆ. ನಿರ್ದಿಷ್ಟ ಕಾರ್ಯಕ್ರಮದ ಮುಖಾಂತರ ಜನರ ಮುಂದೆ ಹೋಗುತ್ತಿದ್ದೇವೆ. ಎಚ್ ಡಿಕೆ ಸಿಎಂ ಆಗಲಿಲ್ಲ ಅಂದ್ರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಂತ ಶಪಥ ಮಾಡಿದರು ಎಂದರು.