ತುಮಕೂರು: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
BREAKING NEWS: ಸಕ್ಕರೆನಾಡಿನಲ್ಲಿ ಇಂದು ಅಮಿತ್ ಶಾ ರಣಕಹಳೆ; ಬೆಂಗಳೂರಿನಿಂದ ಮಂಡ್ಯದತ್ತ ಹೊರಟ ಕೇಂದ್ರ ಗೃಹ ಸಚಿವರು
ಸಿಎಂ ಬೊಮ್ಮಾಯಿ ಅವರು ಲಿಂಗಾಯತ ಮತ್ತು ಒಕ್ಕಲಿಗರಿಗಾಗಿ ಪ್ರತ್ಯೇಕ ಪ್ರವರ್ಗ ರಚಿಸಲು ನಿರ್ಧಾರ ಮಾಡಿರೋದು ನೋಡಿದ್ರೆ ರಂಗ ಎಂಬ ಪದವನ್ನು ತೆಗೆದು ಮಂಗ ಎಂದು ಮಾಡಿದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಜನಾಂಗಕ್ಕೆ ಒಂದು ರೀತಿ ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ಸವರಿ ಅದರ ವಾಸನೆಯನ್ನು ಕೂಡ ಪಡೆದುಕೊಳ್ಳದಂತೆ ಸರ್ಕಾರ ಮಾಡಿದೆ. ಈ ರೀತಿ ಮೀಸಲಾತಿ ವರ್ಗೀಕರಣ ಮಾಡಲು ಸಾವಿರಾರೂ ಕೋಟಿ ರೂ. ಖರ್ಚು ಮಾಡಿ ಆಯೋಗವನ್ನು ರಚಿಸಿರುವುದು ದೊಡ್ಡ ಸಾಧನೆ ಎಂಬಂತೆ ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಇಂತಹದಕ್ಕೆಲ್ಲಾ ಜನ ಮರುಳಾಗುವುದಿಲ್ಲ ಎಂದರು.