ನವದೆಹಲಿ: ಇಂದು ಮತ್ತೆ ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯನ್ನು ಅಷ್ಟೇ ತೀವ್ರವಾಗಿ ಭಾರತೀಯ ಸೇನೆ ಪ್ರತ್ಯುತ್ತರ ನೀಡಿ, ಎಲ್ಲಾ ಡ್ರೋನ್ ಗಳನ್ನು ಹೊಡೆದುರುಳಿಸಿದೆ.
ಇಂದು ಪಾಕಿಸ್ತಾನ ಭಾರತದ ಮೂರು ರಾಜ್ಯಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಯ ಪ್ರಯತ್ನ ನಡೆಸಿದೆ. ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನದ ವಿವಿಧ ನಗರಗಳನ್ನು ಟಾರ್ಗೆಟ್ ಮಾಡಿ ಡ್ರೋನ್ ದಾಳಿ ನಡೆಸಿದೆ.
ಪಾಕಿಸ್ತಾನ ಹಾರಿಸಿದ್ದ ಎಲ್ಲಾ ಡ್ರೋನ್ ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ರಾಜಸ್ಥಾನದ ಜೈಸಲ್ಮೇರ್, ಪ್ರೋಖ್ರಾನ್ ಮೇಲೆಯೂ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ. ಜಮ್ಮು-ಕಾಶ್ಮೀರದ ರಚೌರಿ, ಪೂಂಚ್, ಸಾಂಬಾ, ನೌಗಾಮ್ ಮೇಲೆ ದಾಳಿ ಮಾಡಿದ್ದು, ಭಾರತೀಯ ವಾಯುಪಡೆಯ ಡಿಫೆನ್ಸ್ ಸಿಟ್ಟಂ ಎಲ್ಲವನ್ನು ಧ್ವಂಸಗೊಳಿಸಿದೆ.