ಹಾಸನ : ಹಾಸನಾಂಬೆ ದೇವಿ ದರ್ಶನಕ್ಕಾಗಿ ತನ್ನ ವಿಶೇಷ ಚೇತನ ಪತ್ನಿಯನ್ನ ಎತ್ತಿಕೊಂಡು ಬಂದು ದರ್ಶನ ಮಾಡಿಸುವ ಮೂಲಕ ಪತಿಯ ಬಹುದೊಡ್ಡ ಆಸೆ ತೀರಿಸಿದ ಘಟನೆ ಬೆಳಕಿಗೆ ಬಂದಿದೆ.
‘ಬಗರ್ ಹುಕುಂ’ ಸಾಗುವಳಿಗಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಗುಡ್ ನ್ಯೂಸ್
ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಒಂದು ಸಾವಿರ ಹಾಗೂ ಮುನ್ನೂರು ರೂ.ನ ವಿಶೇಷ ದರ್ಶನದ ಪಾಸ್ ಪಡೆದವರು ದರ್ಶನಕ್ಕೆ ಹೋಗಲು ಗಂಟೆಗಟ್ಟಲೆ ಕಾಯಬೇಕಾಯಿತು. ಈ ವೇಳೆ
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬೀಚೇನಹಳ್ಳಿಯ ನಾಗರಾಜ್ ತಮ್ಮ ಪತ್ನಿ ಗೌರಮ್ಮರನ್ನು ಎತ್ತಿಕೊಂಡು ಬಂದು ದರ್ಶನ ಮಾಡಿಸಿದರು. ಕಳೆದ ವರ್ಷ ಕೂಡ ನಾಗರಾಜ್ ಪತ್ನಿಗೆ ದೇವಿ ದರ್ಶನ ಮಾಡಿಸಿದರು. ಭಾರೀ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ನಡುವೆ ವಿಶೇಷ ಚೇತನೆಯನ್ನು ಹೊತ್ತು ದರ್ಶನಕ್ಕೆ ಬಂದ ನಾಗರಾಜ್ಗೆ ಪೊಲೀಸರು ಆದ್ಯತೆ ನೀಡಿ, ನೇರವಾಗಿ ಗರ್ಭಗುಡಿ ಸಮೀಪ ಕರೆದೊಯ್ದು ಮಾನವೀಯತೆ ಮೆರೆದರು.
‘ಬಗರ್ ಹುಕುಂ’ ಸಾಗುವಳಿಗಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಗುಡ್ ನ್ಯೂಸ್
ಇಂದು ಸರ್ಕಾರಿ ನೌಕರರು ಹಾಗೂ ನ್ಯಾಯಾಂಗ ಇಲಾಖೆಯವರ ಕುಟುಂಬಕ್ಕೆ ದರ್ಶನದ ವ್ಯವಸ್ಥೆ ಮಾಡಿದ್ದರಿಂದ ನೂಕುನುಗ್ಗಲು ಉಂಟಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು