ಬೆಂಗಳೂರು: ಜಮೀನಿಗೆ ತೆರಳೋದಕ್ಕೆ ಅರಣ್ಯ ರಸ್ತೆ ಬಳಸಲು ಇಂಧನ ಸಚಿವ ಕೆಜೆ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಅವರು ಬಂಡೀಪುರದಲ್ಲಿನ ನುಗು ವನ್ಯಜೀವಿ ಅಭಯಾರಣ್ಯ ಬಳಿಯಲ್ಲಿ ಜಮೀನು ಹೊಂದಿದದಾರೆ. ಈ ಜಮೀನಿಗೆ ತೆರಳೋದಕ್ಕೆ ಅಭಯಾರಣ್ಯವಾಗಿದ್ದರಿಂದ ಅರಣ್ಯ ಇಲಾಖೆಯಿಂದ ಅಡ್ಡಿ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಹೈಕೋರ್ಟ್ ಗೆ ಅರಣ್ಯ ರಸ್ತೆ ಬಳಸಿ ಜಮೀನಿಗೆ ತೆರಳಲು ಅನುಮತಿ ಕೋರಿ ಮನವಿ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದಂತ ಪೀಠವು ಷರತ್ತುಬದ್ಧ ಅನುಮತಿ ನೀಡಿ ಆದೇಶಿಸಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಹೈಕೋರ್ಟ್ ಅನುಮತಿ ನೀಡಿದೆ. ಪರಿಸರಕ್ಕೆ ಯಾವುದೇ ಬಗೆಯ ಹಾನಿ ಮಾಡದಂತೆ ಹೈಕೋರ್ಟ್ ಷರತ್ತು ವಿಧಿಸಿದೆ.
BREAKING : ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ತಡೆಯದಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ಕಮಲ್ ಹಾಸನ್!