ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗಣೇಶ ಹಬ್ಬದಲ್ಲಿ ವಿವಿಧ ರೂಪಗಳಲ್ಲಿ ದೇವನನ್ನ ನೋಡುವುದು ಕಣ್ಣಿಗೆ ಹಬ್ಬ. ಕೆಲವು ಪ್ರದೇಶಗಳಲ್ಲಿ, ಚಿನ್ನದ ವಿಗ್ರಹಗಳನ್ನ ಇರಿಸಲಾಗಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಮಣ್ಣಿನ ಗಣಪನನ್ನ ಪೂಜಿಸಲಾಗುತ್ತದೆ. ಆದ್ರೆ, ಎನ್ಟಿಆರ್ ಜಿಲ್ಲೆಯಲ್ಲಿ ವಿಶಿಷ್ಠವಾಗಿ ಕೂರಿಸಲಾಗಿದ್ದು, ನೋಟುಗಳ ನಡುವೆ ಗಣಪ ಕಂಗೊಳಿಸುತ್ತಿದ್ದಾನೆ. 42ನೇ ಗಣಪತಿ ಉತ್ಸವ ಸಮಿತಿ, 42ನೇ ಗಣಪತಿ ಉತ್ಸವ ಸಮಿತಿ ಆಶ್ರಯದಲ್ಲಿ ವಿನಾಯಕ ಚತುರ್ಥಿ ಹಬ್ಬದ ಅಂಗವಾಗಿ ನಂದಿಗಾಮ ಪಟ್ಟಣದ ವಾಸವಿ ಬಜಾರ್’ನಲ್ಲಿ ರಾಜ ದರ್ಬಾರ್ ಗಣಪತಿಯನ್ನ ಆಯೋಜಿಸಲಾಗಿತ್ತು. ಗಣಪತಿ ಆಚರಣೆಯ ಭಾಗವಾಗಿ ಸಮಿತಿಯು ಶುಕ್ರವಾರ ಕರೆನ್ಸಿ ಗಣೇಶನನ್ನ 2.70 ಕೋಟಿ ರೂ.ಗಳಿಂದ ಅಲಂಕರಿಸಿದೆ.
ಇಡೀ ವಿನಾಯಕ ಮಂಟಪವು ಕರೆನ್ಸಿ ನೋಟುಗಳಿಂದ ತುಂಬಿದೆ. ಇಡೀ ಮಂಟಪವನ್ನ ಹೂಗಳ ಬದಲು ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದೆ. ಈ ಕರೆನ್ಸಿ ಗಣೇಶನನ್ನ ನೋಡಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ನಂತರ ಶ್ರೀನಿವಾಸ ಕಲ್ಯಾಣ ಅದ್ದೂರಿಯಾಗಿ ನಡೆಯಲಿದ್ದು, ಇಂದು ರಾತ್ರಿ 15,000 ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸಮಿತಿ ತಿಳಿಸಿದೆ. ಒಟ್ಟು 2.70ಕೋಟಿ ರೂ.ಗಳ ಕರೆನ್ಸಿ ಬಂಡಲ್’ಗಳ ನಡುವೆ ದೇವ ಶ್ರೀಗಣೇಶ ವಿಶೇಷ ಆಕರ್ಷಣೆಯಾಗಿದ್ದಾನೆ.
Good News : ದೀಪಾವಳಿ ವೇಳೆಗೆ ಭಾರತದಲ್ಲಿಯೇ ‘ಐಫೋನ್’ ತಯಾರಿಕೆ, ‘ರತನ್ ಟಾಟಾ’ ಪ್ರಮುಖ ಘೋಷಣೆ!