ಚಿಕ್ಕಮಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕಾಫಿನಾಡು ಭಾರಿ ಮಳೆಯಿಂದಾಗಿ ಹಳ್ಳದಲ್ಲಿ ಕಾಲು ತೊಳೆಯಲು ಹೋಗಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಬಾಲಕಿ ಪತ್ತೆಗೆ ಎಸ್.ಡಿ.ಆರ್.ಎಫ್. ತಂಡ ಆಗಮಿಸಿದೆ.

BREAKING NEWS: ರಾಜ್ಯದಲ್ಲಿ 3708 ಪಿಯು ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಆದೇಶ: ವೇತನವೂ ಹೆಚ್ಚಳ

 

ಸೋಮವಾರ ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ಹೋಗುವಾಗ ಕಾಲು ಕೆಸರಾಯಿತೆಂದು ಹಳ್ಳದಲ್ಲಿ ತೊಳೆದುಕೊಳ್ಳುವ ವೇಳೆ ಆಯಾತಪ್ಪಿ ಬಿದ್ದ ಒಂದನೇ ತರಗತಿ ಬಾಲಕಿ ಸುಪ್ರಿತಾ ನೀರಿನಲ್ಲಿ ಕೊಚ್ಚಿ ಹೋಗಿದ್ದಳು. ಅಂದಿನಿಂದಲೂ ನಿರಂತರ 40 ಗಂಟೆಗೂ ಹೆಚ್ಚು ಹೊತ್ತು ಕಾರ್ಯಾಚರಣೆ ನಡೆಸಿದರೂ ಬಾಲಕಿ ಪತ್ತೆಯಾಗಲಿಲ್ಲ.
ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಈಜು ಪಟುಗಳು 15 ಕಿ.ಮೀ ಉದ್ದದ ಹಳ್ಳದಲ್ಲಿ ಬಾಲಕಿಗಾಗಿ ಹುಡುಕಾಡಿದರು. ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಿಂದ 20 ಜನರ ಎಸ್‌.ಡಿ.ಆರ್.ಎಫ್. ತಂಡ ಆಗಮಿಸಿದೆ.

 

Share.
Exit mobile version