ತುಮಕೂರು: ಈಗಾಗಲೇ ಜೆಡಿಎಸ್ ಪಕ್ಷದಿಂದ (JDS Party) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. 2ನೇ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದ ( Congress Party ) ಈ ತಿಂಗಳ ಅಂತ್ಯಕ್ಕೆ 150 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ.
ಈ ಬಗ್ಗೆ ತುಮಕೂರಿನ ತುರುವೇಕೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಅವರು, ಈ ತಿಂಗಳ ಅಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಮೊದರ ಪಟ್ಟಿಯಲ್ಲಿ 150 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವುದಾಗಿ ಹೇಳಿದರು.
ಇನ್ನೂ ಸಿದ್ದರಾಮಯ್ಯ ಆಪ್ತ ಕೆ ಆರ್ ಪಿಪಿ ಸೇರ್ಪಡೆಯ ವಿಚಾರವಾಗಿ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಅವರಲ್ಲಿ ಯಾರೋ ಒಬ್ಬರು ಹೋದರೇ ಹೋಗಲಿ ಎಂದರು.
ಸಿಎಂ ಬೊಮ್ಮಾಯಿಯವರು ನರೇಂದ್ರ ಮೋದಿಯವರ ಮುಂದೆ ನಾಯಿ ಮರಿ ಇದ್ದಂತೆ ಇರುತ್ತಾರೆ. ಮೋದಿ ಮುಂದೆ ಗಡಗಡ ನಡುಗುತ್ತಾರೆ ಎಂಬುದಾಗಿ ಸಿಎಂ ಬಗ್ಗೆ ವ್ಯಂಗ್ಯವಾಡಿದರು.
ರೈಲಿನ ಬಾಗಿಲ ಬಳಿ ಕುಳಿತು ಪ್ರಯಾಣಿಸಿದ ನಟ ʻಸೋನು ಸೂದ್ʼಗೆ ಉತ್ತರ ರೈಲ್ವೆಯಿಂದ ಬುದ್ಧಿಮಾತು | WATCH VIDEO
‘ನಮ್ಮ ಮೆಟ್ರೋ ಪ್ರಯಾಣಿ’ಕರಿಗೆ ಗುಡ್ ನ್ಯೂಸ್: ಈ ನಿಲ್ದಾಣಗಳಲ್ಲಿ ‘ಆಟೋ ರಿಕ್ಷಾ ಕೌಂಟರ್’ ಓಪನ್