ವಾಷಿಂಗ್ಟನ್ : ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಟ್ರಿಪಲ್ ಜಂಪರ್ ಎಲ್ಡೋಸ್ ಪಾಲ್ ಅವರು ಮಂಗಳವಾರ 16.68 ಮೀಟರ್ ಪ್ರಯತ್ನದೊಂದಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಟ್ರಿಪಲ್ ಜಂಪ್ ಫೈನಲ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
India🇮🇳 created history at @WCHoregon22 !
✅ For the 1st time two Indian Javelin throwers reach the Final at World Championships @Neeraj_chopra1 (88.39m)@RohitJavelin (80.42m)
✅️ Eldhose Paul becomes the 1st Indian to reach the Men’s Triple Jump Final (16.68m) pic.twitter.com/DJeGy7GCJg
— Anurag Thakur (@ianuragthakur) July 22, 2022
ಏಳು ವರ್ಷಗಳ ಹಿಂದೆ ಕೇರಳದಲ್ಲಿ ಭಾರತೀಯ ಟ್ರಿಪಲ್ ಜಂಪರ್ ಗಿಂತ ಉತ್ತಮ ಕ್ರೀಡಾಪಟುಗಳು ಇದ್ದಾರೆ ಎಂದು ಅಧಿಕಾರಿಗಳು ನಂಬಿದ್ದರಿಂದ ಎಲ್ಡೋಸ್ ಅವರನ್ನು ಕ್ರೀಡಾ ವಿದ್ಯಾರ್ಥಿವೇತನಕ್ಕೆ ತಿರಸ್ಕರಿಸಲಾಯಿತು. ಅದರೂ ಇದೀಗ ಯುಎಸ್ಎಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ದಾಖಲೆಯನ್ನೆ ಬರೆದಿದ್ದು ಹೆಗ್ಗಳಿಕೆಗ ಗಳಿಸಿದ್ದಾರೆ
ಟ್ರಿಪಲ್ ಜಂಪ್ನಲ್ಲಿ ಎಲ್ಡೋಸ್ ಪಾಲ್ 16.68 ಮೀ. ಹಾರುವ ಮೂಲಕ ಫೈನಲ್ಗೆ ಗ್ರೂಪ್ A ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟರೆ, ಜಾವಲಿನ್ ಥ್ರೋನಲ್ಲಿ ರೋಹಿತ್ ಯಾದವ್ 80.42 ಮೀ. ಎಸೆದು ಗ್ರೂಪ್ B ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಫೈನಲ್ಗೆ ತೇರ್ಗಡೆಗೊಂಡಿದ್ದಾರೆ.
ಈ ಮೊದಲು ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್ನ ಚಿನ್ನದ ಹುಡುಗ ನೀರಜ್ ಚೋಪ್ರಾ 88.39 ಮೀ. ಎಸೆದು ಕೂಟದ ಗ್ರೂಪ್ A ವಿಭಾಗದಲ್ಲಿ ಮೊದಲನೇ ಸ್ಪರ್ಧಿಯಾಗಿ ಫೈನಲ್ಗೆ ಎಂಟ್ರಿಕೊಟ್ಟಿದ್ದರು. ಈ ಮೂಲಕ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಒಂದೇ ದಿನ ಭಾರತದ ಮೂವರು ಆಟಗಾರರು ಫೈನಲ್ಗೆ ಲಗ್ಗೆ ಇಟ್ಟು ಪದಕ ನಿರೀಕ್ಷೆ ಹುಟ್ಟಿಸಿದ್ದಾರೆ.
39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಪದಕ ಗೆದ್ದಿದ್ದು 1 ಬಾರಿ ಮಾತ್ರ 2003ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಆ ಬಳಿಕ ಇದೀಗ ಮತ್ತೆ ಭಾರತದ ಕ್ರೀಡಾಪಟುಗಳು ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.