ಬೆಂಗಳೂರು: ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವದ ಅಂಗವಾಗಿ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಮತ್ತು ಸಾಧನೆಯನ್ನು ಕುರಿತ ಅಂಶಗಳನ್ನು ಒಳಗೊಂಡ ಭಾಷಣ, ಪ್ರಬಂಧ ಸ್ಪರ್ಧೆ ಸೇರಿ ದಂತೆ ಇನ್ನಿತರ ಚಟುವಟಿಕೆಗಳನ್ನು ಆಯೋಜಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಹಿಂದೆ ನಡೆಸಲು ಉದ್ದೇಶಿಸಿದ್ದ ಚರ್ಚಾ ಸ್ಪರ್ಧೆಯ ಬದಲಾಗಿ ಭಾಷಣ ಮತ್ತು ಪ್ರಬಂಧಸ್ಪರ್ಧೆ ಹಾಗೂ ಜಿಲ್ಲಾಧಿಕಾರಿ, ಜಿಲ್ಲಾಡಳಿತ ತೀರ್ಮಾನಿಸುವ ಇನ್ನಿತರ ಚಟುವಟಿಕೆ ನಡೆಸುವಂತೆ ಪರಿಷ್ಕೃತ ಸುತ್ತೋಲೆ ಹೊರಡಿಸಲಾಗಿದೆ. ಈ ಕಾರ್ಯಕ್ರಮಗಳಿಗಾಗಿ ಈಗಾಗಲೇ ಪ್ರತಿ ತಾಲ್ಲೂಕು ಬಿಇಒಗಳಿಗೆ ತಲಾ ಒಂದು ಲಕ್ಷ ರು. ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ.
ಆದ್ದ ರಿಂದ ಬಿಇಒಗಳು ತಮ್ಮ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿನ ದೈನಂದಿನ ಪಾಠ – ಪ್ರವಚನಗಳಿಗೆ ತೊಂದರೆ ಆಗದಂತೆ ಕೆಂಪೇಗೌಡರ ಕುರಿತು ಭಾಷಣ, ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲು ಇಲಾಖೆ ಆಯುಕ್ತ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.