ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿಗೆ ನಾಯಿಮರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ದೇಶ ಕಾಯುವಾಗ ನಾವು ನಿಯತ್ತಿನ ನಾಯಿಗಳು. ಜೊತೆಗೆ ದೇಶ – ರಾಜ್ಯದ ಹಿತಾಸಕ್ತಿ ಪ್ರಶ್ನೆ ಬಂದಾಗ ನಾವೆಲ್ಲರೂ ರಾಜಾಹುಲಿಗಳು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾಯಿ ನಿಯತ್ತಿನ ಪ್ರಾಣಿ. ತುತ್ತು ಅನ್ನ ಹಾಕಿದ್ರೆ ಜೀವನಪರ್ಯಂತ ನಿಯತ್ತಾಗಿರುತ್ತೆ. ನಿಯತ್ತು ಇಲ್ಲದೇ ಇರೋರು ಕಾಂಗ್ರೆಸ್ನವರು.ಉಂಡ ಮನೆಗೆ ದ್ರೋಹ ಬಗೆಯುವವರು ಎಂದು ಹೇಳಿದ್ದಾರೆ.
BIGG NEWS: ದಾವಣಗೆರೆ ಕನಕ ಗುರು ಪೀಠಕ್ಕೆ ಜೆ.ಪಿ.ನಡ್ಡಾ ಭೇಟಿ; ಶ್ರೀಗಳೊಂದಿಗೆ ಗುಪ್ತ ಸಮಾಲೋಚನೆ
ಜೆಡಿಎಸ್ನಲ್ಲಿದ್ದು ಅವರಿಗೆ ದ್ರೋಹ ಬಗೆದವರು ಯಾರು? ಜಿ.ಪರಮೇಶ್ವರ್ ಸಿಎಂ ಆಗಿಬಿಡ್ತಾರೆ ಅಂತಾ ಸೋಲಿಸಿದವರು ಯಾರು? ಸಿದ್ದರಾಮಯ್ಯ ತಮ್ಮ ಆತ್ಮ ಸಾಕ್ಷಿ ಪ್ರಶ್ನೆ ಮಾಡಿಕೊಳ್ಳಲಿ. ಆಗ ನಿಯತ್ತು ಯಾರಿಗೆ ಇದೆ ಯಾರಿಗೆ ಇಲ್ಲಾ ಅನ್ನೋದು ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ಗುಡುಗಿದ್ದಾರೆ.