ಬೆಂಗಳೂರು: ದಿವಂಗದ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಅಕ್ರಮ ಆಸ್ತಿ ಜಪ್ತಿ, ದಂಡ ವಸೂಲಿಗೆ ವಿಶೇಷ ಕೋರ್ಟ್ ಆದೇಶಿಸಿದೆ. ಅಲ್ಲದೇ ಕರ್ನಾಟಕಕ್ಕೆ ವ್ಯಾಜ್ಯ ಶುಲ್ಕವಾಗಿ 5 ಕೋಟಿ ಪಾವಿಸುವಂತೆಯೂ ಆದೇಶಿಸಲಾಗಿದೆ.
ಈ ಕುರಿತಂತೆ ಇಂದು ವಿಶೇಷ ಕೋರ್ಟ್ ವಿಚಾರಣೆ ನಡೆಸಿ ಸೂಚನೆ ನೀಡಿದೆ. ದಿವಂಗದ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಅಕ್ರಮ ಆಸ್ತಿ ಜಪ್ತಿ ಹಾಗೂ ದಂಡ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಜಪಾತಿಯಾದ ಆಸ್ತಿ ವಿವರವನ್ನು ಕೋರ್ಟ್ ಗೆ ಎಸ್ ಪಿಪಿ ಕಿರಣ್ ಎಸ್ ಜವಳಿ ಸಲ್ಲಿಸಿದರು. ವ್ಯಾಜ್ಯ ಶುಲ್ಕವಾಗಿ ಕರ್ನಾಟಕಕ್ಕೆ 5 ಕೋಟಿ ಪಾವತಿಸುವಂತೆ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೇ ಡಿಡಿ ರೂಪದಲ್ಲಿ ಕರ್ನಾಟಕಕ್ಕೆ ನೀಡಲು ಸೂಚಿಸಿದೆ.
ಇನ್ನೂ ಜಯಲಲಿತಾ ಒಡವೆಗಳು ಬೆಂಗಳೂರಿನ ಕೋರ್ಟ್ ವಶದಲ್ಲಿರುವ ಹಿನ್ನಲೆಯಲ್ಲಿ ಒಡವೆ ಹರಾಜು ಬದಲು, ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳುವಂತೆ ಹೇಳಿದೆ. ಗೃಹ ಕಾರ್ಯದರ್ಶಿ, ಪೊಲೀಸರೊಂದಿಗೆ ಹಾಜರಾಗಬೇಕು. ಒಡವೆಗಳನ್ನು ಗುರುತಿಸಿ, ತಮಿಳುನಾಡು ಸರ್ಕಾರದ ಸುಪರ್ಧಿಗೆ ಪಡೆದುಕೊಳ್ಳಲು ವಿಶೇಷ ಕೋರ್ಟ್ ಸೂಚಿಸಿದೆ.
‘ಭಾರತೀಯ ಮುಸ್ಲಿಮರನ್ನ ಪ್ರಚೋದಿಸುವ ಪ್ರಯತ್ನ’ : ರಾಮ ಮಂದಿರ ನಿರ್ಮಾಣಕ್ಕೆ ‘ಪಾಕ್’ ಖಂಡನೆ, ‘ಭಾರತ’ ತರಾಟೆ
BREAKING : ಭಗವಂತ ಶ್ರೀರಾಮನ ಸವಿನೆನಪು : ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ ಘೋಷಿಸಿದ ‘ನಮೋ’