ಮಂಗಳೂರು: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಜೆಡಿಎಸ್ ನಿಂದ ಧರ್ಮ ಸತ್ಯ ಯಾತ್ರೆ ಕೈಗೊಳ್ಳಲಾಗಿದೆ. ಇಂತಹ ಧರ್ಮ ಸತ್ಯ ಯಾತ್ರೆ ಇದೀಗ ಶ್ರೀಕ್ಷೇತ್ರ ಧರ್ಮಸ್ಥಳವನ್ನು ತಲುಪಿದೆ.
ಶ್ರೀಕ್ಷೇತ್ರ ಧರ್ಮಸ್ಥಳವನ್ನು ಜೆಡಿಎಸ್ ನ ಧರ್ಮ ಸತ್ಯ ಯಾತ್ರೆ ತಲುಪಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದೆ.
ಧರ್ಮಸ್ಥಳದ ಮುಖಮಂಟಪದಿಂದ ಜೆಡಿಎಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಶಾಸಕ ಎ ಮಂಜು, ಹೆಚ್.ಟಿ ಮಂಜು, ಸಿಎಸ್ ಬಾಲಕೃಷ್ಣ, ಸುರೇಶ್ ಗೌಡ, ಪರಿಷತ್ ಸದಸ್ಯ ಭೋಜೇಗೌಡ ಮತ್ತಿತರರು ಈ ಧರ್ಮ ಸತ್ಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಮೈಸೂರು ದಸರಾ ಧರ್ಮಾತೀತ, ಜಾತ್ಯಾತೀತ ಹಬ್ಬ: ಬಾನು ಮುಷ್ತಾಕ್ ಅವರೇ ಉದ್ಘಾಟನೆ- ಸಿಎಂ ಸಿದ್ಧರಾಮಯ್ಯ







