ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಸಡಗರ ಮನೆ ಮಾಡಿದೆ. ಪಟಾಕಿ ಸಿಡಿತದಿಂದ 78 ಮಂದಿ ಗಾಯಗೊಂಡಿದ್ದಾರೆ.
ಮಹಿಳೆಗೆ ಕಪಾಳ ಮೋಕ್ಷ ಪ್ರಕರಣ: ಸಿಎಂ ಬೊಮ್ಮಾಯಿ ಭೇಟಿಯಾದ ಸಚಿವ ವಿ.ಸೋಮಣ್ಣ
ಪಟಾಕಿ ಸಿಡಿತದಿಂದ ಹನಿಗೊಂಡವರು ಇದೀಗ ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ, ನೇತ್ರದಾಮ, ಶಂಕರ್ ಕಣ್ಣಿನ ಆಸ್ಪತ್ರೆ, ಅಸ್ಟರ್ ಸಿಎಂಐ, ಮೋದಿ ಕಣ್ಣಿನ ಆಸ್ಪತ್ರೆ, ವಿಕ್ಟೋರಿಯಾ ಸುಟ್ಟ ಗಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪ್ರತಿ ವರ್ಷ ದೀಪಾವಳಿ ವೇಳೆ ಪಟಾಕಿ ಸಿಡಿಸಿ ಜನರು ಸಂಭ್ರಮಿಸುತ್ತಾರೆ. ಪಟಾಕಿ ಹೊಡೆಯುವ ವೇಳೆ ಅದೆಷ್ಟೋ ಮಂದಿ ಗಾಯಗೊಳ್ಳುತ್ತಾರೆ.
ಮಹಿಳೆಗೆ ಕಪಾಳ ಮೋಕ್ಷ ಪ್ರಕರಣ: ಸಿಎಂ ಬೊಮ್ಮಾಯಿ ಭೇಟಿಯಾದ ಸಚಿವ ವಿ.ಸೋಮಣ್ಣ
ಅದರಲ್ಲಿಯೂ ಮಕ್ಕಳೇ ಹೆಚ್ಚಾಗಿ ಹಾನಿಗೊಳಗಾಗುತ್ತಾರೆ. ಅದರಂತೆ ಈ ಬಾರಿ ಕೂಡ 5 ರಿಂದ 18 ವರ್ಷದ ಒಳಗಿನ ಮಕ್ಕಳೇ ಪಟಾಕಿ ಸಿಡಿತಕ್ಕೆ ಹೆಚ್ಚಾಗಿ ಗಾಯಗೊಂಡಿದ್ದಾರೆ. ಸದ್ಯ ಬೆಳಕು ಚೆಲ್ಲಾಬೇಕಿದ್ದ ದೀಪಾವಳಿ, ಈ ಮಕ್ಕಳ ಬಾಳಲ್ಲಿ ಕತ್ತಲೆ ತಂದಿದೆ. ಇದೀಗ ಮಿಂಟೋ ಆಸ್ಪತ್ರೆ ಸೇರಿದಂತೆ ನಗರದ ಹಲವು ಕಣ್ಣಿನ ಆಸ್ಪತ್ರೆಯಲ್ಲಿ 78 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.