ದಾವಣಗೆರೆ : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ದಾವಣಗೆರೆ ನಗರದಲ್ಲಿ ಹಾಡಹಗಲೇ ಪಾಗಲ್ ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ ನಡೆದಿದೆ.
ಯುವತಿ ಮನೆಯಿಂದ ಕೆಲಸಕ್ಕೆಂದು ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಚಾಂದ್ ಸಾದತ್ ಎಂಬ ಯುವಕ ಆಕೆಯನ್ನು ಅಡ್ಡಗಟ್ಟಿ ಚಾಕುವಿನಿಂದ ಕತ್ತು ಕೊಯ್ದು ಓಡಿಹೋಗಿದ್ದ , ನಂತರ ಆತ ಕೂಡ ವಿಷ ಸೇವಿಸಿದ್ದನು. ಇತ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆಕೆ ಬದುಕಲಿಲ್ಲ.
ಘಟನೆ ನಡೆದ ಬಳಿ ಸಾದತ್ ಕೂಡ ವಿಷ ಸೇವಿಸಿದ್ದು, ಚಿಕಿತ್ಸೆಗಾಗಿ ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರಯ ಪಿಜೆ ಬಡಾವಣೆಯ ಚರ್ಚ್ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದನು. . ಚಾಂದ್ ಸುಲ್ತಾನಾಳಿಗೆ 8 ತಿಂಗಳ ಹಿಂದೆ ಹರಿಹರ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥ ಆಗಿತ್ತು. ವಿವಾಹಕ್ಕೆ ವಿರೋಧಿಸಿ ಸುಲ್ತಾನಳನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
BIGG NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಎಲ್ಲಾ ಹಂತದ ‘ವಿದ್ಯಾರ್ಥಿ ವೇತನ’ ಮುಂದುವರಿಕೆ
BREAKING NEWS : ಖ್ಯಾತ ನಟ ‘ಕೈಕಲಾ ಸತ್ಯನಾರಾಯಣ’ ನಿಧನ ; ಗಣ್ಯರಿಂದ ಸಂತಾಪ |Kaikala Sathyanarayana No more