Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಮೋತ್ತೇಜಕ, ಲೈಂಗಿಕ ಜೀವನವನ್ನು ಉತ್ತಮಗೊಳಿಸುವ 7 ಅದ್ಭುತ ಆಹಾರಗಳಿವು

03/05/2026 9:21 PM

ಸಂತೋಷದಾಯಕ ಲೈಂಗಿಕ ಜೀವನಕ್ಕೆ ‘ಫೋರ್‌ಪ್ಲೇ’ ಏಕೆ ಮುಖ್ಯ? ಇಲ್ಲಿವೆ ಪ್ರಮುಖ ಕಾರಣಗಳು

03/05/2026 9:18 PM

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

03/05/2026 9:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾರಂಟಿಯಿದ್ದರೂ ರಿಪೇರಿಗೆ ಹಣ ಕೇಳಿದ ‘ಓಲಾ ಸರ್ವಿಸ್ ಸೆಂಟರ್’ಗೆ 67,348 ಪರಿಹಾರ ನೀಡಲು ಕೋರ್ಟ್ ಆದೇಶ
KARNATAKA

ವಾರಂಟಿಯಿದ್ದರೂ ರಿಪೇರಿಗೆ ಹಣ ಕೇಳಿದ ‘ಓಲಾ ಸರ್ವಿಸ್ ಸೆಂಟರ್’ಗೆ 67,348 ಪರಿಹಾರ ನೀಡಲು ಕೋರ್ಟ್ ಆದೇಶ

By kannadanewsnow0928/08/2025 2:47 PM

ಶಿವಮೊಗ್ಗ : ಶಂಕರಯ್ಯ, ಶಿವಮೊಗ್ಗ ಇವರು ವ್ಯವಸ್ಥಾಪಕರು, ಓಲಾ ಸರ್ವೀಸ್ ಸೆಂಟರ್ ಶಿವಮೊಗ್ಗ, ಎಂ.ಡಿ ಓಲಾ ಎಲೆಕ್ಟ್ರಿಕಲ್ ಟೆಕ್ನಾಲಾಜಿ ಪ್ರೈ.ಲಿ ಬೆಂಗಳೂರು ಹಾಗೂ ವ್ಯವಸ್ಥಾಪಕರು ಓಲಾ ಎಲೆಕ್ಟ್ರಿಕಲ್ ಟೆಕ್ನಾಲಾಜಿ ಪ್ರೈವೆಟ್ ಲಿ. ಬೆಂಗಳೂರು ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಎದುರುದಾರರಿಗೆ ಆದೇಶಿಸಿದೆ.

ದೂರುದಾರರು ಆನ್‌ಲೈನ್ ಮೂಲಕ ರೂ.1,51,071 ಪಾವತಿಸಿ ದಿ:26/5/2022 ರಂದು ಒಂದು ಓಲಾ ಎಲೆಕ್ಟ್ರಿಕಲ್ ಸ್ಕೂಟರನ್ನು ಬುಕ್ ಮಾಡಿದ್ದು, ದಿ:10/6/2022 ರಂದು ಪಡೆದುಕೊಂಡಿರುತ್ತಾರೆ. ಈ ಸ್ಕೂಟರ್ 8 ವರ್ಷಗಳ ಬ್ಯಾಟರಿ ವಾರಂಟಿ ಮತ್ತು ಇತರೇ ಭಾಗಗಳಿಗೆ ಮೂರು ವರ್ಷಗಳ ವಾರೆಂಟಿ ಹೊಂದಿರುತ್ತದೆ. ಸ್ಕೂಟರ್‌ನ್ನು ವಶಕ್ಕೆ ಪಡೆದ ನಂತರ ದಿ:10/07/2022 ರಂದು ಗಾಡಿ ಸ್ಟಾರ್ಟ್ ಆಗದಿರುವುದರಿಂದ ದಿ:12/7/2022 ರಂದು ರಿಪೇರಿಗಾಗಿ ಬಿಟ್ಟಿದ್ದು ಸಂಸ್ಥೆಯವರು ರಿಪೇರಿ ಮಾಡಿ ನೀಡಿರುತ್ತಾರೆ. ತದನಂತರ ದಿ:9/1/2025 ರಂದು ಪುನಃ ಸ್ಟಾರ್ಟ್ ಆಗದಿರುವುದರಿಂದ 1 ನೇ ಎದುರುದಾರರಿಗೆ ಈ ಬಗ್ಗೆ ತಿಳಿಸಿದ್ದು ಎದುರುದಾರರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ದಿ:18/1/2025 ರಂದು 1 ನೇ ಎದುರುದಾರರ ಬಳಿ ರಿಪೇರಿಗಾಗಿ ಬಿಟ್ಟು ಆನ್‌ಲೈನ್‌ನಲ್ಲಿ ದೂರನ್ನು ದಾಖಲಿಸಿದಾಗ, ದಿ:3/3/2025 ರಂದು ರಿಪೇರಿಗಾಗಿ ರೂ.90,000 ಗಳನ್ನು ಪಾವತಿಸಿದಲ್ಲಿ ರಿಪೇರಿ ಮಾಡುವುದಾಗಿ ತಿಳಿಸಿರುತ್ತಾರೆ.

ಓಲಾ ಸ್ಕೂಟರ್ ಇನ್ನೂ ವಾರಂಟಿ ಅವಧಿಯಲ್ಲಿದ್ದರೂ ರಿಪೇರಿ ಮಾಡದೇ, ಸ್ಕೂಟರ್‌ನ್ನು ತಮ್ಮ ಅಧೀನದಲ್ಲಿಯೇ ಇಟ್ಟುಕೊಂಡಿದ್ದು ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ದೂರನ್ನು ಸಲ್ಲಿಸಿರುತ್ತಾರೆ.

ದೂರನ್ನು ದಾಖಲಿಸಿಕೊಂಡು ಮೇಲ್ಕಂಡ ದೂರಿಗೆ ಆಕ್ಷೇಪಣೆಯನ್ನು ಸಲ್ಲಿಸಲು 1 ರಿಂದ 3 ರ ವರೆಗಿನ ಎದುರುದಾರರಿಗೆ ನೋಟಿಸ್ ನೀಡಿದ್ದು, ನೋಟಿಸ್ ಜಾರಿಯಾಗಿದ್ದರೂ ಎಲ್ಲಾ ಎದುರುದಾರರು ಗೈರು ಹಾಜರಾಗಿದ್ದರಿಂದ 1 ರಿಂದ 3 ನೇ ಎದುರುದಾರರನ್ನು ಏಕಪಕ್ಷೀಯ ಎಂದು ಪರಿಗಣಿಸಲಾಗಿದೆ.

ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ, ದಾಖಲಾತಿಗಳನ್ನು ಪರಿಶೀಲಿಸಿ ವಾದವನ್ನು ಆಲಿಸಿ ಎದುರುದಾರರು ಓಲಾ ಸ್ಕೂಟರ್ ವಾರಂಟಿ ಅವಧಿಯಲ್ಲಿದ್ದರೂ ಸಹ ರಿಪೇರಿ ಮಾಡಿಕೊಡದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, 1 ರಿಂದ 3 ನೇ ಎದುರುದಾರರು ದೂರುದಾರರಿಗೆ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ರೂ.67,348 ಗಳಿಗೆ ದಿ:18/1/2025 ರಿಂದ ವಾರ್ಷಿಕ ಶೇ.10 ರ ಬಡ್ಡಿಯನ್ನು ಸೇರಿಸಿ ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಮತ್ತು 1 ರಿಂದ 3 ನೇ ಎದುರುದಾರರು ರೂ.40,000 ಗಳನ್ನು ಮಾನಸಿಕ ವೇದನೆಗಾಗಿ ಪರಿಹಾರವಾಗಿ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ವಾರ್ಷಿಕ ಶೇ.12 ರಂತೆ ಬಡ್ಡಿಯನ್ನು ಸೇರುಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಈ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠ ದಿ:19/8/2025 ರಂದು ಆದೇಶಿಸಿದೆ.

‘ಅಪ್ಪು’ ನಮ್ಮನ್ನು ಸೇರಿಸಿದ್ರು; ವಿವಾಹದ ಬಳಿಕ ಆಂಕರ್ ಅನುಶ್ರೀ ಮೊದಲ ರಿಯಾಕ್ಷನ್

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಮಾಸ್ಕ್ ಮ್ಯಾನ್ `ಚಿನ್ನಯ್ಯ’ ವಿರುದ್ಧ ಸೌಜನ್ಯಾ ತಾಯಿ `SIT’ಗೆ ದೂರು.!

Share. Facebook Twitter LinkedIn WhatsApp Email

Related Posts

ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್

03/05/2026 8:36 PM2 Mins Read

ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ

03/05/2026 8:34 PM1 Min Read

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM1 Min Read
Recent News

ಕಾಮೋತ್ತೇಜಕ, ಲೈಂಗಿಕ ಜೀವನವನ್ನು ಉತ್ತಮಗೊಳಿಸುವ 7 ಅದ್ಭುತ ಆಹಾರಗಳಿವು

03/05/2026 9:21 PM

ಸಂತೋಷದಾಯಕ ಲೈಂಗಿಕ ಜೀವನಕ್ಕೆ ‘ಫೋರ್‌ಪ್ಲೇ’ ಏಕೆ ಮುಖ್ಯ? ಇಲ್ಲಿವೆ ಪ್ರಮುಖ ಕಾರಣಗಳು

03/05/2026 9:18 PM

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

03/05/2026 9:09 PM

ಭಾರತದಲ್ಲಿ ಹೆಚ್ಚುತ್ತಿದೆ ‘ಸ್ಲೀಪ್ ಡಿವೋರ್ಸ್’ ಕ್ರೇಜ್: ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಿರುವುದೇಕೆ?

03/05/2026 9:01 PM
State News
KARNATAKA

ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್

By kannadanewsnow0903/05/2026 8:36 PM KARNATAKA 2 Mins Read

ಮಂಡ್ಯ : ಜಿಲ್ಲೆಯಲ್ಲಿನ ಪುಸ್ತಕದ ಮನೆಯೊಂದು ಜಿಲ್ಲೆ ಮತ್ತು ರಾಜ್ಯವನ್ನು ದಾಟಿ ರಾಷ್ಟ್ರದ ರಾಜಧಾನಿ ದೆಹಲಿವರೆವಿಗೂ ತಲುಪಿರುವುದು ಶ್ಲಾಘನೀಯ ಕಾರ್ಯವೆಂದು…

ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ

03/05/2026 8:34 PM

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM

Watch Video: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎಳೆನೀರು ತುಂಬಿದ್ದ ಬೊಲೆರೊ ವಾಹನ ಪಲ್ಟಿ: ಭಯಾನಕ ವೀಡಿಯೋ ಇಲ್ಲಿದೆ

03/05/2026 7:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.