ಧಾರವಾಡ: ಕಾಂಗ್ರೆಸ್ ಒಡೆದ ಮನೆಯಾಗಿದೆ. ಆ ಮನೆಗೆ ಮೂರು ಬಾಗಿಲುಗಳಿವೆ. ಎರಡು ಬಾಗಿಲುಗಳಾಗಿದ್ದವು. ಈಗ ಖರ್ಗೆ ಅವರದ್ದೊಂದು ಬಾಗಿಲು ಹುಟ್ಟಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ್ ಖರ್ಗೆ ಬೆಂಬಲಿಗರ ಗುಂಪು ಹುಟ್ಟಿಕೊಂಡಿದೆ.ಹಾಗಾಗಿ ಕಾಂಗ್ರೆಸ್ ಎಷ್ಟು ಯಾತ್ರೆ ಮಾಡಿದರೂ ಸುಧಾರಣೆ ಆಗಲ್ಲ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂದು ದೇಶವೇ ನೋಡುತ್ತಿದೆ. ಗುಜರಾತ್ಗೆ ಈಗಾಗಲೇ ನಾನು ಎರಡು ಬಾರಿ ಹೋಗಿ ಬಂದಿದ್ದೇನೆ. ಅಲ್ಲಿ ಕಾಂಗ್ರೆಸ್ ಅಡ್ರೆಸ್ಗಿಲ್ಲದಂತಾಗಿದೆ. ದೇಶದಲ್ಲೂ ಕೂಡ ನಾಪತ್ತೆಯಾಗುತ್ತಿದೆ ಎಂದು ಕುಟುಕಿದ್ದಾರೆ.
ಹಿಂದಿ ಹೇರಿಕೆ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಎಲ್ಲಾ ಕೋರ್ಸ್ಗಳಿರಬೇಕು, ಆಯಾ ರಾಜ್ಯಗಳ ಭಾಷೆಯಲ್ಲೇ ಇರಬೇಕು ಎಂದು ಹೇಳಿದೆ ಎಂದರು