ಬೆಂಗಳೂರು : 112 ದಿನಗಳ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ತೆರೆ ಬಿದ್ದಿದೆ. ಈ ಒಂದು ಸೀಸನ್ 12ರ ವಿಜೇತರಾಗಿ ನಟರಾಜ್ ಅಲಿಯಾಸ್ ಗಿಲ್ಲಿ ಹೊರಹೊಮ್ಮಿದ್ದಾರೆ. ಇನ್ನು ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ಇದೀಗ ಮೂರನೇ ರನ್ನರ್ ತಪ್ಪಾಗಿ ಸ್ಥಾನ ಪಡೆದ ಕಾವ್ಯ ಶೈವ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಿಲ್ಲಿ ನಟ ಅವರಿಗೆ ಶುಭಾಶಯ ಕೋರಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ ಹೇ ಗಿಲ್ಲಿ ಕಂಗ್ರಾಜುಲೇಷನ್ಸ್ ಕಣೋ. You deserve it from ZERO to HERO now More to go ಆದಷ್ಟು ಬೇಗ Action Cut ಹೇಳೋ ಹಾಗಾಗ್ಲಿ ತುಂಬಾ ತುಂಬಾ ಒಳ್ಳೆಯದಾಗಲಿ ಎಂದು ಕಾವ್ಯಶೈವ ಅವರು ಗಿಲ್ಲಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.








