ಬೆಂಗಳೂರು : ರಾಜ್ಯ ಸರ್ಕಾರದ ಸಿಎ ಶಾಲಿನಿ ರಜನೀಶ್ ಅವರ ಕುರಿತು ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ಸಂಸದೀಯ ಪದ ಬಳಸಿದ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎನ್. ರವಿಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರವಿ ಕುಮಾರ್ ವಿರುದ್ಧ ಹೆಬ್ಬಾಳ್ಕರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಿಪ್ ಚೀಫ್ ಆಗಿ ಮಾತಾಡ್ತಾನೆ ಉಗಿಬೇಕು. ಮಹಿಳೆಯರು ಹಾದಿ ಬೀದಿಯಲ್ಲಿ ರವಿಕುಮಾರ್ ಅವರನ್ನು ಕೇಳಬೇಕು ಹೇಗಿದೆ ಅಂತ ಹೇಳಿಕೆಯಿಂದ ಗೊತ್ತಾಗುತ್ತದೆ. ಇದು ಇಡೀ ಬಿಜೆಪಿಗೆ ಕಳಂಕ ಇದು ಬಿಜೆಪಿ ನಾಯಕರು ಮನಸ್ಥಿತಿಯಾಗಿದೆ.
ಬಿಜೆಪಿ ನಾಯಕರು ಮಹಿಳೆಯರ ಬಗ್ಗೆ ಮಾತನಾಡೋದು ಹೀಗೆ ಅನಿಸುತ್ತದೆ ಇದೇ ಮೊದಲ ಬಿಜೆಪಿಯವರು ಅನೇಕ ಬಾರಿ ಹೀಗೆ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಿಎಸ್ ಅವರು ಸರ್ಕಾರದ ಮುಖ್ಯಸ್ಥರು ಮಹಿಳೆಯರಿಗೆ ಶಾಲಿನಿ ರಜನೀಶ್ ರೋಲ್ ಮಾಡೆಲ್ ಆಗಿದ್ದಾರೆ. ನನಗೂ ಸಿಎಸ್ ಶಾಲಿನಿ ರಜನಿಶ್ ರೋಲ್ ಮಾಡೆಲ್ ಆಗಿದ್ದರು. ಯಾರೇ ಆಗಲಿ ಮಹಿಳೆಯರಿಗೆ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹೆಬ್ಬಾಳ್ಕರ್ ಆಕ್ರೋಶ ಹೊರಹಕಿದ್ದಾರೆ.