ಬೆಂಗಳೂರು : ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದು ಬಾನು ಮುಷ್ತಾಕ್ ಅಂತವರು ದಸರಾ ಉದ್ಘಾಟನೆ ಮಾಡಿದರೆ ಸ್ವಾಗತ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರ್ತಿಯಾಗಿದ್ದಾರೆ. ವಿರೋಧ ಮಾಡುವ ಬಿಜೆಪಿಯವರ ಮನಸ್ಥಿತಿ ಗೊತ್ತಾಗುತ್ತದೆ ಮಹಿಳೆಯರನ್ನು ಬಿಜೆಪಿ ಅವರು ಯಾವತ್ತೂ ಒಪ್ಪುವುದಿಲ್ಲ ಪಾನಕ ಕೋಸಂಬರಿ ತಿಂದುಕೊಂಡಿರುವುದೇ ಒಳ್ಳೆಯದು ಎಂದು ಬಿಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ಆರ್ ಎಸ್ ಎಸ್ ಗೀತೆ ಹಾಡಿದ್ದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ ವಿಚಾರವಾಗಿ ಡಿಸಿಎಂ ಆಗಿ ಗೀತೆ ಹೇಳಿದರೆ ತಪ್ಪಿಲ್ಲ ಪಕ್ಷದ ಅಧ್ಯಕ್ಷರಾಗಿ ಹೇಳಿದ್ದು ಗೀತೆ ಹೇಳಿದ್ದು ತಪ್ಪು ಡಿಕೆ ಶಿವಕುಮಾರ್ ನಾನು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಲ್ಲ ಸುಮಾರು ದಶಕಗಳ ಹಿಂದೆ ಯಾರೂ ಕಟ್ಟಿದ ಪಕ್ಷ ಇದು. ತ್ರಿವರ್ಣ ಧ್ವಜದ ವಿರುದ್ಧ ವಿರುವವರು ಬಿಜೆಪಿ ಅವರು ಎಂದು ಆಕ್ರೋಶ ಹೊರಹಾಕಿದರು.
ನಾನು ಕಾಂಗ್ರೆಸ್ ಕಾರ್ಯಕರ್ತನಾಗಿ ಆ ರೀತಿ ಹೇಳಬಾರದು. ಕೆ ಎನ್ ರಾಜಣ್ಣ ಅವರು ರಾಹುಲ್ ಗಾಂಧಿ ವಿರುದ್ಧ ಮಾತನಾಡಿಲ್ಲ ಅವರ ಹೇಳಿಕೆ ತದ್ವಿರುದ್ಧವಾಗಿರಬಹುದು ರಾಹುಲ್ ಮತ್ತು ಸೋನಿಯಾ ವಿರುದ್ಧ ಯಾರು ಮಾತನಾಡಿರಲಿಲ್ಲ. ಪಕ್ಷ ನಿಷ್ಠೆಯ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ ವಿಚಾರವಾಗಿ ಪಕ್ಷ ನಿಷ್ಠೆ ಅನ್ನೋದರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ ಎಂದರು.