ಬೆಂಗಳೂರು: ಒಂದೆಡೆ ಹಣ ಕೊಟ್ಟು ಮಂತ್ರಿಗಿರಿ ಪಡೆದಿದ್ದಾರೆ ಎನ್ನುತ್ತಾರೆ ಬಿಜೆಪಿಯದ್ದೇ ಶಾಸಕರು. ಇನ್ನೊಂದೆಡೆ ಹಣ ಪಡೆದು ವಿವಿಗಳಿಗೆ ಕುಲಪತಿಗಳನ್ನ ನೇಮಿಸಲಾಗುತ್ತಿದೆ ಎಂದು ಬಿಜೆಪಿಯದ್ದೇ ಸಂಸದರು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರದ ಅಕ್ರಮಗಳನ್ನು ಬಿಜೆಪಿಗರೇ ತೆರೆದಿಡುತ್ತಿದ್ದಾರೆ, ಆದರೂ ತನಿಖೆ ಮಾತ್ರ ಆಗುವುದಿಲ್ಲವೇಕೆ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನೆ ಮಾಡಿದೆ.
ಒಂದೆಡೆ ಹಣ ಕೊಟ್ಟು ಮಂತ್ರಿಗಿರಿ ಪಡೆದಿದ್ದಾರೆ ಎನ್ನುತ್ತಾರೆ ಬಿಜೆಪಿಯದ್ದೇ ಶಾಸಕರು.
ಇನ್ನೊಂದೆಡೆ ಹಣ ಪಡೆದು ವಿವಿಗಳಿಗೆ ಕುಲಪತಿಗಳನ್ನ ನೇಮಿಸಲಾಗುತ್ತಿದೆ ಎಂದು ಬಿಜೆಪಿಯದ್ದೇ ಸಂಸದರು ಆರೋಪಿಸಿದ್ದಾರೆ.@BJP4Karnataka ಸರ್ಕಾರದ ಅಕ್ರಮಗಳನ್ನು ಬಿಜೆಪಿಗರೇ ತೆರೆದಿಡುತ್ತಿದ್ದಾರೆ, ಆದರೂ ತನಿಖೆ ಮಾತ್ರ ಆಗುವುದಿಲ್ಲವೇಕೆ?
— Karnataka Congress (@INCKarnataka) December 21, 2022
ಈ ಕುರಿತು ಸರಣಿ ಟ್ವಿಟ್ ಮಾಡಿದ್ದು, ಸರ್ಕಾರದ ನಿರ್ಧಾರಗಳನ್ನು ಬಿಜೆಪಿ ಶಾಸಕರೇ ಒಪ್ಪಲು ತಯಾರಿಲ್ಲ, ಅಶ್ವತ್ಥನಾರಾಯಣ ಅವರ ವಿವಿ ಸ್ಥಾಪನೆ ನಿರ್ಧಾರದ ಹಿಂದೆ ಹಣ ಲೂಟಿ ಹೊಡೆಯುವ ಹುನ್ನಾರವಿದೆ ಎಂದು ಯತ್ನಾಳ್ ಸ್ಪಷ್ಟವಾಗಿ ಹೇಳಿದ್ದಾರೆ. ಆಗ ಸಹಾಯಕ ಪ್ರಾಧ್ಯಾಪಕ ನೇಮಕ ಹಗರಣ, ಈಗ ವಿಸಿ ನೇಮಕಕ್ಕೆ ವಸೂಲಿ ಬಯಲಿಗೆ. ಅಶ್ವಥ್ ನಾರಾಯಣ್ ಅವರ ಭ್ರಷ್ಟ ಕೈಗಳು ಅದೆಷ್ಟು ಉದ್ಧವಾಗಿವೆ? ಎಂದು ಕೇಳಿದೆ.
ಸರ್ಕಾರದ ನಿರ್ಧಾರಗಳನ್ನು ಬಿಜೆಪಿ ಶಾಸಕರೇ ಒಪ್ಪಲು ತಯಾರಿಲ್ಲ, @drashwathcn ಅವರ ವಿವಿ ಸ್ಥಾಪನೆ ನಿರ್ಧಾರದ ಹಿಂದೆ ಹಣ ಲೂಟಿ ಹೊಡೆಯುವ ಹುನ್ನಾರವಿದೆ ಎಂದು ಯತ್ನಾಳ್ ಸ್ಪಷ್ಟವಾಗಿ ಹೇಳಿದ್ದಾರೆ.
ಆಗ ಸಹಾಯಕ ಪ್ರಾಧ್ಯಾಪಕ ನೇಮಕ ಹಗರಣ, ಈಗ ವಿಸಿ ನೇಮಕಕ್ಕೆ ವಸೂಲಿ ಬಯಲಿಗೆ.
ಅಶ್ವಥ್ ನಾರಾಯಣ್ ಅವರ ಭ್ರಷ್ಟ ಕೈಗಳು ಅದೆಷ್ಟು ಉದ್ಧವಾಗಿವೆ? pic.twitter.com/Avl7Boazl1— Karnataka Congress (@INCKarnataka) December 21, 2022
ಆಡಳಿತ ಪಕ್ಷದಲ್ಲೇ ವಿರೋಧ ಪಕ್ಷವೂ ಇದೆ! ಇದು ಮನೆಯೊಂದು ಮುನ್ನೂರು ಬಾಗಿಲಾಗಿರುವ ಬಿಜೆಪಿ ದುಸ್ಥಿತಿ. ಆರೋಪ ಮಾಡಿದವರೂ ಬಿಜೆಪಿಯವರೇ, ದಾಖಲೆ ಕೇಳುವವರೂ ಬಿಜೆಪಿಯವರೇ, ಆದರೆ ಆರೋಪದ ತನಿಖೆಯನ್ನು ಮಾತ್ರ ಮಾಡಲು ಒಪ್ಪುತ್ತಿಲ್ಲ ಬಸವರಾಜ ಬೊಮ್ಮಾಯಿ ಅವರು. ವಿಸಿ ನೇಮಕದಲ್ಲಿ ಹಣ ಪಡೆದವರು ಯಾರು ಎಂಬುದನ್ನು ಅಶ್ವತ್ಥನಾರಾಯಣ ಬಹಿರಂಗಪಡಿಸಲಿ ಎಂದು ಹೇಳಿದೆ.
ಆಡಳಿತ ಪಕ್ಷದಲ್ಲೇ ವಿರೋಧ ಪಕ್ಷವೂ ಇದೆ!
ಇದು ಮನೆಯೊಂದು ಮುನ್ನೂರು ಬಾಗಿಲಾಗಿರುವ @BJP4Karnataka ದುಸ್ಥಿತಿ.ಆರೋಪ ಮಾಡಿದವರೂ ಬಿಜೆಪಿಯವರೇ, ದಾಖಲೆ ಕೇಳುವವರೂ ಬಿಜೆಪಿಯವರೇ, ಆದರೆ ಆರೋಪದ ತನಿಖೆಯನ್ನು ಮಾತ್ರ ಮಾಡಲು ಒಪ್ಪುತ್ತಿಲ್ಲ @BSBommai ಅವರು.
ವಿಸಿ ನೇಮಕದಲ್ಲಿ ಹಣ ಪಡೆದವರು ಯಾರು ಎಂಬುದನ್ನು @drashwathcn ಬಹಿರಂಗಪಡಿಸಲಿ. pic.twitter.com/dSQ7xLvVql
— Karnataka Congress (@INCKarnataka) December 21, 2022
ಹಣ ನೀಡಿ ಪೊಲೀಸರು ಪೋಸ್ಟಿಂಗ್ ಪಡೆಯುತ್ತಾರೆ – MTB ನಾಗರಾಜ್. ನಿರಾಣಿ ಹಣ ನೀಡಿ ಮಂತ್ರಿಯಾಗಿದ್ದಾರೆ – ಬಸನಗೌಡ ಪಾಟೀಲ್ ಯತ್ನಾಳ್. 5, 6 ಕೋಟಿ ನೀಡಿ ವಿವಿ ಕುಲಪತಿಗಳಾಗಿದ್ದಾರೆ – ಸಂಸದ ಪ್ರತಾಪ್ ಸಿಂಹ, ಬಸವರಾಜ ಬೊಮ್ಮಾಯಿ ಅವರಿಗೆ ದಮ್ಮು, ತಾಕತ್ತಿದ್ದರೆ ಹಣ ಪಡೆದವರು ಯಾರೆಂದು ಹೇಳಲಿ. ಇಲ್ಲವೇ ಅವರ ಹೇಳಿಕೆ ಆಧಾರದಲ್ಲಿ ಉನ್ನತ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದೆ.
◆ಹಣ ನೀಡಿ ಪೊಲೀಸರು ಪೋಸ್ಟಿಂಗ್ ಪಡೆಯುತ್ತಾರೆ – MTB ನಾಗರಾಜ್
◆ನಿರಾಣಿ ಹಣ ನೀಡಿ ಮಂತ್ರಿಯಾಗಿದ್ದಾರೆ – @BasanagoudaBJP
◆5, 6 ಕೋಟಿ ನೀಡಿ ವಿವಿ ಕುಲಪತಿಗಳಾಗಿದ್ದಾರೆ – @mepratap @BSBommai ಅವರಿಗೆ ದಮ್ಮು, ತಾಕತ್ತಿದ್ದರೆ ಹಣ ಪಡೆದವರು ಯಾರೆಂದು ಹೇಳಲಿ.
ಇಲ್ಲವೇ ಅವರ ಹೇಳಿಕೆ ಆಧಾರದಲ್ಲಿ ಉನ್ನತ ತನಿಖೆಗೆ ವಹಿಸಲಿ.
— Karnataka Congress (@INCKarnataka) December 21, 2022
ಸರ್ಕಾರಿ ಆಸ್ಪತ್ರೆಗಳು ಭ್ರಷ್ಟಾಚಾರದ ಕೂಪಗಳಾಗಿವೆ ಎಂಬುದಕ್ಕೆ ಸಾಲು ಸಾಲು ಉದಾಹರಣೆಗಳಿವೆ. ಟೆಂಡರ್ ಕರೆಯದೆಯೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಹಳೆಯ ಕಟ್ಟಡಗಳನ್ನು ಕೆಡವಲಾಗಿರುವ ಸಂಗತಿ ಬೆಳಕಿಗೆ ಬಂದಿದೆ. ನಿಯಮ ಮೀರಿ ಕಾಮಗಾರಿ ಕೈಗೊಂಡಿದ್ದರ ಹಿಂದೆ ಸಚಿವ ಸುಧಾಕರ್ ಅವರ ಪಾತ್ರವಿದೆಯೇ? ಇದರಲ್ಲಿ ಎಷ್ಟು ಕಮಿಷನ್ ಪಡೆಯಲಾಗಿದೆ? ಎಂದು ಕೇಳಿದೆ.
ಸರ್ಕಾರಿ ಆಸ್ಪತ್ರೆಗಳು ಭ್ರಷ್ಟಾಚಾರದ ಕೂಪಗಳಾಗಿವೆ ಎಂಬುದಕ್ಕೆ ಸಾಲು ಸಾಲು ಉದಾಹರಣೆಗಳಿವೆ.
ಟೆಂಡರ್ ಕರೆಯದೆಯೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಹಳೆಯ ಕಟ್ಟಡಗಳನ್ನು ಕೆಡವಲಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ನಿಯಮ ಮೀರಿ ಕಾಮಗಾರಿ ಕೈಗೊಂಡಿದ್ದರ ಹಿಂದೆ ಸಚಿವ @mla_sudhakar ಅವರ ಪಾತ್ರವಿದೆಯೇ? ಇದರಲ್ಲಿ ಎಷ್ಟು ಕಮಿಷನ್ ಪಡೆಯಲಾಗಿದೆ? pic.twitter.com/P2rPBs4sku
— Karnataka Congress (@INCKarnataka) December 21, 2022