ಚಿಕ್ಕಮಗಳೂರು: ಬಿಜೆಪಿ ಅಧಿಕಾರಕ್ಕೆ ಬಂದು ಅಮಾಯಕರ ಕೈಯಲ್ಲಿ ಕೊಲೆ ಸುಲಿಗೆ ಮಾಡಿಸುತ್ತಿದೆ. ಮಂಗಳೂರಲ್ಲಿ ನಾವು ಬಿಜೆಪಿಯನ್ನು ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ‘ವಾಟ್ಸಾಪ್ ಸ್ಟೇಟಸ್’ ಹಾಕಿ ಕೆಲಸ ಕಳ್ಕೊಂಡ ‘ಪಂಚಾಯತಿ ಕ್ಲರ್ಕ್’
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಯವರು ಜಾತಿ-ಧರ್ಮಕ್ಕೆ ದ್ರೋಹ ಮಾಡಿದ್ದು, 80 ಪರ್ಸೆಂಟ್ ಹಿಂದೂಗಳಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಮಂಗಳೂರಲ್ಲಿ ಬಿಜೆಪಿ-ಸಂಘಪರಿವಾರ ಹಾಗೂ ವಿಹೆಚ್ಪಿಯವರೇ ಸಮಾಜಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಆಜಾನ್ ಕೇಳಿದ ತಕ್ಷಣ ಇಲ್ಲಿ ಯಾರು ಹಾರ್ಟ್ ಅಟ್ಯಾಕ್ ಆಗಿ ಸತ್ತಿಲ್ಲ. ಆಜಾನ್ ವಿಷಯದಲ್ಲಿ ಮುಸ್ಲಿಮರಿಗೂ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.