ಮಂಡ್ಯ: ಬಿರಿಯಾನಿ ಅಂದ್ರೆ ಅನೇಕರು ಇಷ್ಟ ಪಡ್ತಾರೆ. ರುಚಿಯಾಗಿದ್ದರಂತೂ ಆ ಹೋಟೆಲ್ ಗೆ ಖಾಯಂ ಗಿರಾಕಿ ಆಗಿಬಿಡ್ತಾರೆ. ಹೀಗೆ ನೀವು ಬಿರಿಯಾನಿ ರುಚಿಯಾಗಿರುತ್ತೆ ಅಂತ ತಿನ್ನೋದಕ್ಕೆ ಹೋಗೋ ಮುನ್ನಾ ಶಾಕಿಂಗ್ ಸುದ್ದಿ ಮುಂದಿದೆ ಓದಿ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಜನರಿಗೆ ನಾಯಿ ಮಾಂಸ ತಿನ್ನಿಸುತ್ತಿದ್ದ ಅನ್ಯಕೋಮಿನ ವ್ಯಕ್ತಿ ಬಂಧಿಸಲಾಗಿದೆ.
ಚಿನಕುರಳಿ ಗ್ರಾಮದಲ್ಲಿ ಮದೀನಾ ಹೆಸರಿನ ಹೋಟೇಲ್ ಅನ್ನು ಅನ್ಯಕೋಮಿನ ವ್ಯಕ್ಯಿ ನಡೆಸುತ್ತಿದ್ದನು. ತನ್ನ ಹೋಟೇಲ್ ನಲ್ಲಿ ಬಿರಿಯಾನಿಗೆ ನಾಯಿ ಮಾಂಸ ಬೆರಿಸಿ ಜನರಿಗೆ ತಿನ್ನಿಸ್ತಿದ್ದ ಆರೋಪ ಮಾಡಲಾಗಿತ್ತು.
ಮಂಗಳವಾರದಂದು ನಾಯಿ ಮಾಂಸದ ಸಾಕ್ಷಿಯೊಂದಿಗೆ ಜನರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಹೀಗಾಗಿ ಹೋಟೆಲ್ ಮಾಲೀಕ ಅಜಾದ್ ನನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದಕ್ಕೂ ಮುನ್ನಾ ಮದೀನಾ ಹೋಟೇಲ್ ನಲ್ಲಿ ನಾಯಿ ಮಾಂಸದ ಬಿರಿಯಾನಿ ತಿನ್ನಿಸಿದ್ದಕ್ಕೆ ರೊಚ್ಚಿಗೆದ್ದ ಜನರಿಂದ ಆರೋಪಿಗೆ ಧರ್ಮಧೇಟು ನೀಡಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಪಾಂಡವಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.