Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯರು ಚಿನ್ನದ ಮೇಲಿನ ವ್ಯಾಮೋಹ ಏಕೆ ಕಡಿಮೆ ಮಾಡಿಕೊಳ್ಳಬೇಕು? ಪ್ರಧಾನಿ ಮೋದಿ ಕರೆಯ ಹಿಂದಿರುವ ಆರ್ಥಿಕ ರಹಸ್ಯ ಇಲ್ಲಿದೆ

ನಿಮ್ಮ ಲೈಂಗಿಕ ಜೀವನಕ್ಕೆ ಹಾನಿ ಮಾಡುತ್ತಿರುವ 7 ದೈನಂದಿನ ಅಭ್ಯಾಸಗಳಿವು, ಇಂದೇ ಕಡಿಮೆ ಮಾಡಿ

‘ಯಾರೂ ಆತಂಕಕ್ಕೊಳಗಾಗಬೇಡಿ: ಪ್ರಧಾನಿ ಮೋದಿ ಕರೆಗೆ ತಪ್ಪು ಅರ್ಥ ಬೇಡ; ದೇಶದಲ್ಲಿ ಪೆಟ್ರೋಲ್, ಡೀಸೆಲ್ ದಾಸ್ತಾನು ಸಮೃದ್ಧವಾಗಿದೆ’ ಎಂದ ಕೇಂದ್ರ ಸರ್ಕಾರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ ಜಿಲ್ಲೆಯ ಸೊರಬದ ‘ಬಂಗಾರ ಧಾಮ’ ಈಗ ಐತಿಹಾಸಿಕ ಪ್ರವಾಸಿ ತಾಣ
KARNATAKA

ಶಿವಮೊಗ್ಗ ಜಿಲ್ಲೆಯ ಸೊರಬದ ‘ಬಂಗಾರ ಧಾಮ’ ಈಗ ಐತಿಹಾಸಿಕ ಪ್ರವಾಸಿ ತಾಣ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ‘ಬಂಗಾರ ಧಾಮ’ವನ್ನು ರಾಜ್ಯ ಸರ್ಕಾರ ಐತಿಹಾಸಿಕ ಪ್ರವಾಸಿ ತಾಣವಾಗಿ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

‘ಬಂಗಾರ ಧಾಮ’ ವನ್ನು ಮಧು ಬಂಗಾರಪ್ಪ ಅವರ ನೇತೃತ್ವದ ಎಸ್. ಬಂಗಾರಪ್ಪ ಫೌಂಡೇಶನ್ ನಿರ್ವಹಿಸುತ್ತಿದೆ. ಮಧು ಬಂಗಾರಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿರುವುದಲ್ಲದೇ ಬಂಗಾರ ಧಾಮವನ್ನು ಬಂಗಾರಪ್ಪ ನವರ ಚಿಂತನೆ, ಅಭಿರುಚಿ, ಜನಸಮೂಹದೊಂದಿಗೆ ಅವರಿಗಿದ್ದ ಬಾಂಧವ್ಯಕ್ಕೆ ತಕ್ಕಂತೆ ನಿರ್ಮಾಣವಾಗಿರುವುದು ವಿಶೇಷ.

ಗೃಹ ಸಚಿವರಾದ ಡಾ. ಜಿ. ಪರಮೇಶ್ವರ, ಕಾನೂನು, ಸಂಸತ್ತೀಯ ವ್ಯವಹಾರಗಳ ಸಚಿವರಾದ ಎಚ್. ಕೆ. ಪಾಟೀಲ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್, ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಬೋಸರಾಜು, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ಶಾಸಕರು, ಸಚಿವರು ಹಾಗೂ ಹಿರಿಯ ನಾಯಕರು ಈ ಸ್ಥಳಕ್ಕೆ ಭೇಟಿ ನೀಡಿ ‘ಬಂಗಾರ ಧಾಮ’ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಲ್ಲದೆ, ಈಗಾಗಲೇ ‘ಬಂಗಾರ ಧಾಮ’ ಅನೇಕ ಗಣ್ಯರು, ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ.

‘ಬಂಗಾರ ಧಾಮ’ವು ಕರ್ನಾಟಕದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ಮತ್ತು ಶಕುಂತಲಮ್ಮ ಅವರ ಪುಣ್ಯಸ್ಥಳವಾಗಿ ಅಭಿಮಾನಿಗಳ ಮನದಾಳದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸೊರಬದ ಮಧ್ಯಭಾಗದಲ್ಲಿರುವ ಈ ಧಾಮವು ದೇಶದಲ್ಲಿಯೇ ವಿಭಿನ್ನ ಶಕ್ತಿಧಾಮವಾಗಿ ಗುರುತಿಸಿಕೊಂಡಿದೆ.

ಸುಮಾರು ಒಂದು ಕಾಲು ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಧಾಮವು 100×100 ಅಡಿ ವ್ಯಾಪ್ತಿಯ ವಿಶಿಷ್ಟ ವಿನ್ಯಾಸದ ಪುಣ್ಯಸ್ಥಳವಾಗಿದ್ದು, ಗ್ರಾನೈಟ್ ಮತ್ತು ಮಾರ್ಬಲ್ ಕೆತ್ತನೆಯ ಕಲಾಕೃತಿಗಳು ಇದರ ಸೌಂದರ್ಯವನ್ನು ಹೆಚ್ಚಿಸಿವೆ. ಧ್ಯಾನಮಂದಿರ, ಕುಡಿಯುವ ನೀರು, ಶೌಚಾಲಯ, ವಾಕಿಂಗ್ ಪಾಥ್, ಹೂವಿನ ತೋಟ, ಅಲಂಕಾರಿಕ ಗಿಡಗಳು ಸೇರಿದಂತೆ ಅಗತ್ಯ ಸೌಲಭ್ಯಗಳು ಇಲ್ಲಿ ಲಭ್ಯ.

ಇದಲ್ಲದೆ, 1,500 ಮಂದಿಗೆ ಆಸನ ವ್ಯವಸ್ಥೆಯೊಂದಿಗೆ ಆಧುನಿಕ ಬಯಲು ರಂಗಮಂದಿರ ನಿರ್ಮಾಣಗೊಂಡಿದ್ದು, ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ. ಹೆಲಿಫ್ಯಾನ್ ಅಳವಡಿಕೆಯೊಂದಿಗೆ ವಾತಾವರಣ ಮತ್ತಷ್ಟು ಸುಂದರಗೊಂಡಿದೆ.

ಸಂಪಿಗೆ ಮರ, ಕಲ್ಪವೃಕ್ಷ, ಈಚಲು ಮರಗಳನ್ನು ಒಳಗೊಂಡ ಸಸ್ಯಸಂಪತ್ತಿ, 56 ಅಡಿ ಎತ್ತರದ ಕ್ಲಾಕ್ ಟವರ್, ವಿದ್ಯುದ್ಲಂಕಾರ ಹಾಗೂ ಆಕರ್ಷಕ ಸಂಗೀತ ಬಂಗಾರ ಧಾಮದ ವೈಶಿಷ್ಟ್ಯಗಳಾಗಿ ಕಂಗೊಳಿಸುತ್ತಿವೆ.

ಸರ್ಕಾರಿ ಆಸ್ಪತ್ರೆಯಲ್ಲೇ ಲಿಂಗಪತ್ತೆ ಪರೀಕ್ಷೆ ನಡೆಸಿದ ರಾಮನಗರ ಜಿಲ್ಲಾಸ್ಪತ್ರೆ ರೆಡಿಯಾಲಜಿಸ್ಟ್ ಡಾ.ಶಶಿ ಅಮಾನತು

ಭೂಕಂಪ ಪೀಡಿತ ಆಫ್ಘಾನ್ ಸಂತ್ರಸ್ತರಿಗೆ ಭಾರತದಿಂದ ನೆರವು: 1000 ಫ್ಯಾಮಿಲಿ ಟೆಂಟ್ ಅಫ್ಘಾನಿಸ್ತಾನಕ್ಕೆ ರವಾನೆ

Share. Facebook Twitter LinkedIn WhatsApp Email

Related Posts

ಸಂಭ್ರಮಿಸಬೇಕಾದ ಹುಟ್ಟುಹಬ್ಬವೇ ಸಾವಿನ ದಿನವಾಯ್ತು; ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

1 Min Read

Scam Alert: ವಾಟ್ಸ್ ಆಪ್ ನಲ್ಲಿ ಬರೋ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡೋ ಮುನ್ನಾ ಈ ಸುದ್ದಿ ಓದಿ! | Wedding Invitation APK Scam

2 Mins Read

ಈ ರೈಲುಗಳ ಸೇವೆ ಮರುಸ್ಥಾಪನೆ, ಪರಿಷ್ಕರಣೆ

1 Min Read
Recent News

ಭಾರತೀಯರು ಚಿನ್ನದ ಮೇಲಿನ ವ್ಯಾಮೋಹ ಏಕೆ ಕಡಿಮೆ ಮಾಡಿಕೊಳ್ಳಬೇಕು? ಪ್ರಧಾನಿ ಮೋದಿ ಕರೆಯ ಹಿಂದಿರುವ ಆರ್ಥಿಕ ರಹಸ್ಯ ಇಲ್ಲಿದೆ

ನಿಮ್ಮ ಲೈಂಗಿಕ ಜೀವನಕ್ಕೆ ಹಾನಿ ಮಾಡುತ್ತಿರುವ 7 ದೈನಂದಿನ ಅಭ್ಯಾಸಗಳಿವು, ಇಂದೇ ಕಡಿಮೆ ಮಾಡಿ

‘ಯಾರೂ ಆತಂಕಕ್ಕೊಳಗಾಗಬೇಡಿ: ಪ್ರಧಾನಿ ಮೋದಿ ಕರೆಗೆ ತಪ್ಪು ಅರ್ಥ ಬೇಡ; ದೇಶದಲ್ಲಿ ಪೆಟ್ರೋಲ್, ಡೀಸೆಲ್ ದಾಸ್ತಾನು ಸಮೃದ್ಧವಾಗಿದೆ’ ಎಂದ ಕೇಂದ್ರ ಸರ್ಕಾರ

ಸಂಭ್ರಮಿಸಬೇಕಾದ ಹುಟ್ಟುಹಬ್ಬವೇ ಸಾವಿನ ದಿನವಾಯ್ತು; ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

State News
KARNATAKA

ಸಂಭ್ರಮಿಸಬೇಕಾದ ಹುಟ್ಟುಹಬ್ಬವೇ ಸಾವಿನ ದಿನವಾಯ್ತು; ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಳಗಾವಿ: ಇಲ್ಲಿನ ಅಜಂ ನಗರದ ವಿದ್ಯಾರ್ಥಿನಿಲಯದಲ್ಲಿ ಯುವತಿಯೊಬ್ಬಳು ತನ್ನ ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ. ಮೃತ ಯುವತಿಯನ್ನು…

Scam Alert: ವಾಟ್ಸ್ ಆಪ್ ನಲ್ಲಿ ಬರೋ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡೋ ಮುನ್ನಾ ಈ ಸುದ್ದಿ ಓದಿ! | Wedding Invitation APK Scam

ಈ ರೈಲುಗಳ ಸೇವೆ ಮರುಸ್ಥಾಪನೆ, ಪರಿಷ್ಕರಣೆ

ಬೆಂಗಳೂರಿನಲ್ಲಿ ಭೀಕರ ದುರಂತ: ಶೆಡ್‌ಗೆ ಬೆಂಕಿ ಬಿದ್ದು ಇಬ್ಬರು ಕಂದಮ್ಮಗಳು ಜೀವಂತ ದಹನ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.