ಬಾಗಲಕೋಟೆ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿ ನಾಲ್ಕು ದಿನಗಳು ಕಳೆದ್ರೂ ಭಕ್ತರ ಸಂಖ್ಯೆ ಕೊಂಚವೂ ಕಡಿಮೆ ಆಗಿಲ್ಲ.
BIGG NEWS : ಶಾಲಾ ಮಕ್ಕಳಿಗೆ `ನೈತಿಕ ಶಿಕ್ಷಣ’ : ನಾಳೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಮಹತ್ವದ ಸಭೆ
ಪ್ರತಿನಿತ್ಯ ಸಾವಿರರಾರು ಜನರು ಮಠಕ್ಕೆ ಬಂದು ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ. ಇದೀಗ ಅವರ ಚಿತಾಭಸ್ಮವನ್ನು ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ.
.ಜ್ಞಾನ ಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಬಳಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಮಠಾಧೀಶರು ವಿಶೇಷ ವಾಹನಗಳಲ್ಲಿ ಚಿತಾಭಸ್ಮ ತಂದು ಬೋಟ್ಗಳಲ್ಲಿ ತೆರಳಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿದ್ದಾರೆ.
BIGG NEWS : ಶಾಲಾ ಮಕ್ಕಳಿಗೆ `ನೈತಿಕ ಶಿಕ್ಷಣ’ : ನಾಳೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಮಹತ್ವದ ಸಭೆ
ಮೊದಲಿಗೆ ಕೂಡಲಸಂಗಮೇಶ್ವರನ ಆವರಣದಲ್ಲಿ ಪೂಜೆ ಪುನಸ್ಕಾರ ಸಲ್ಲಿಸಿ ಬಳಿಕ ತ್ರಿವೇಣಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಈ ಪುಣ್ಯ ಕಾರ್ಯದಲ್ಲಿ ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ಸ್ವಾಮೀಜಿಗಳು ಭಾಗಿಯಾಗಿದ್ದರು.