ಮಂಡ್ಯ : “ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಹಾಲು ಉತ್ಪನ್ನ ಘಟಕ, ಗೆಜ್ಜಲಗೆರೆ ಕಚೇರಿ ಆವರಣ” ದಲ್ಲಿ ಸೆಪ್ಟೆಂಬರ್ 12 ರಂದು ಬೆಳಗ್ಗೆ 10:25 ಗಂಟೆಗೆ ಒಕ್ಕೂಟದ ಅಧ್ಯಕ್ಷರಾದ ಯು.ಸಿ. ಶಿವಕುಮಾರ್(ಶಿವಪ್ಪ ಉಮ್ಮಡಹಳ್ಳಿ) ಅಧ್ಯಕ್ಷತೆಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ವಾರ್ಷಿಕ ಸಾಮಾನ್ಯ ಸಭೆಯನ್ನು ಆಯೋಜಿಸಲಾಗಿದೆ. ಸದರಿ ಸಭೆಗೆ ಸದಸ್ಯ ಸಂಘಗಳ ಪ್ರತಿನಿಧಿಗಳು ವಾರ್ಷಿಕ ಸಾಮಾನ್ಯ ಸಭೆಗೆ ಸಕಾಲದಲ್ಲಿ ಹಾಜರಾಗಬೇಕಾಗಿ ಕೋರಿದೆ.
ಪೂರ್ಣ ವಿವರಗಳನ್ನೊಳಗೊಂಡ ವಾರ್ಷಿಕ ಸಾಮಾನ್ಯ ಸಭೆಯ ನೋಟೀಸನ್ನು ಎಲ್ಲಾ ಸದಸ್ಯ ಸಂಘಗಳಿಗೂ ಅಂಚೆ ಮೂಲಕ ಈಗಾಗಲೇ ಕಳುಹಿಸಲಾಗಿದೆ. ಅಂಚೆ ಮೂಲಕ ನೋಟೀಸು ತಲುಪದೇ ಇದ್ದ ಪಕ್ಷದಲ್ಲಿ ಪತ್ರಿಕಾ ಪ್ರಕಟಣೆಯನ್ನು ಅಧಿಕೃತ ನೋಟಿಸ್ ಎಂದು ಪರಿಗಣಿಸುವುದು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಗಳು ಕಡ್ಡಾಯವಾಗಿ ಸಂಘದ ನಿರ್ಣಯದ ಪ್ರತಿಯೊಂದಿಗೆ ಹಾಜರಾಗುವಂತೆ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.