ಶಿವಮೊಗ್ಗ : ರಾಜ್ಯ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಅಂದ್ರೆ ಅದು ಜನರಿಗೆ ಬೆಲೆ ಏರಿಕೆಯ ಬಿಸಿ ನೀಡಿದ್ದಾಗಿದೆ. ಸಾಗರ ಶಾಸಕರದ್ದು ಹಿಂದಿನ ಶಾಸಕರ ಅವಧಿಯಲ್ಲಿ ಬಿಡುಗಡೆ ಮಾಡಲಾಗಿದ್ದಂತ ಅನುದಾನದಲ್ಲಿ ಗುದ್ದಲಿಪೂಜೆ ನೆರವೇರಿಸುತ್ತಿರೋದಾಗಿ ಸಾಗರ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಹೇಳಿದ್ದಾರೆ.
ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕೇಂದ್ರ ಸರ್ಕಾರ ಮಂಜೂರು ಮಾಡಿದಂತ ಅನುದಾನದಲ್ಲಿನ ತುಮರಿ ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಅದೇ ಹಸಿರುಮಕ್ಕಿ ಸೇತುವೆ ಮಾತ್ರ ಕಾಡೋಡು ತಿಮ್ಮಪ್ಪ ಅವಧಿಯಲ್ಲಿ ಮಂಜೂರಾಗಿ, ಹಾಲಿ ಶಾಸಕರು ಎರಡು ವರ್ಷ ಪೂರೈಸಿದರೂ ಮುಗಿಯುತ್ತಿಲ್ಲ ಏಕೆ ಎಂಬುದಾಗಿ ಪ್ರಶ್ನಿಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಎರಡು ವರ್ಷದ ಸಾಧನೆ ಅಂದ್ರೆ ಅದು ಜನರಿಗೆ ಬೆಲೆ ಏರಿಕೆ ಶಾಕ್ ಕೊಟ್ಟಿದ್ದೇ ಆಗಿದೆ. ಜನನ-ಮರಣ ಪ್ರಮಾಣ ಪತ್ರ 10 ರೂಪಾಯಿ ಇದ್ದದ್ದು 50 ರೂಪಾಯಿಗೆ ಏರಿಕೆ ಮಾಡಿದ್ದು, ರೈತರ ಪಹಣಿ ಬೆಲೆ ಏರಿಸಿದ್ರು. ರೈತರ ಅಕ್ರಮ ಪಂಪ್ ಸೆಟ್ ಸಕ್ರಮಗೊಳಿಸುವಂತ ದರವನ್ನು ದುಪ್ಪಟ್ಟು ಮಾಡಿದ್ದಾರೆ. ಮಳೆಯಿಂದ ಹಾನಿಗೊಂಡ ಮನೆಗೆ ನೀಡುವಂತ ಪರಿಹಾರ ಬಿಜೆಪಿ ಅವಧಿಯಲ್ಲಿ 5 ಲಕ್ಷ ಕೊಡಲಾಗುತ್ತಿತ್ತು ಅದನ್ನು 1.25 ಲಕ್ಷಕ್ಕೆ ಇಳಿಸಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅವರು ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಬಗ್ಗೆ ಮಾತನಾಡುತ್ತ ಪ್ರತಿ ಗ್ರಾಮ ಪಂಚಾಯ್ತಿಗೆ 1 ಕೋಟಿ ಅನುದಾನ ಕೊಡಲಾಗಿದೆ ಅಂತ ಹೇಳಿದ್ದಾರೆ. ಇದು ಸುಳ್ಳು. ನಿಜವೇ ಆಗಿದ್ದರೇ ದಾಖಲೆ ಸಹಿತ ಜನರ ಮುಂದೆ ಬಿಚ್ಚಿಡಲಿ ಎಂಬುದಾಗಿ ಸವಾಲು ಹಾಕಿದರು.
ತಿರಂಗ ಯಾತ್ರೆಯಲ್ಲಿ ಪಾಕಿಸ್ತಾನಕ್ಕೆ ಧಿಕ್ಕಾರ ಕೂಗಿದರೇ ನಗರ ಕಾಂಗ್ರೆಸ್ ಅಧ್ಯಕ್ಷ ಕಸಿವಿಸಿ ಅನುಭವಿಸಿದ್ದಾರೆ. ಪಾಕಿಸ್ತಾನಕ್ಕೆ ಧಿಕ್ಕಾರ ಕೂಗಿದರೇ ಸುರೇಶ್ ಬಾಬು ಯಾಕೆ ಮುಜುಗರ ಉಂಟಾಗುತ್ತದೆ ಎಂಬುದಾಗಿ ಕೇಳಿದರು.
ಈ ಬಳಿಕ ಸಾಗರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್ ಗಣೇಶ್ ಪ್ರಸಾದ್ ಮಾತನಾಡಿ, ಹಿಂದಿನ ಶಾಸಕರ ಅವಧಿಯಲ್ಲಿ ಸಾಗರ ನಗರಸಭೆಯ 31 ವಾರ್ಡ್ ಗೆ ನಗರೋತ್ಥಾನ ಯೋಜನೆಯಡಿ 30 ಕೋಟಿ ಅನುದಾನ ಮಂಜೂರಾಗಿದೆ. ಅಲ್ಲದೇ ವಿಶೇಷ ಅನುದಾನ 7 ಕೋಟಿಯಾಗಿದೆ. ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಿಂದ ಅನುದಾನ ಮಂಜೂರಾಗಿದೆ. ಅದನ್ನು ಬಿಟ್ಟರೇ ಹಾಲಿ ಶಾಸಕರ ಅವಧಿಯ ಎರಡು ವರ್ಷದಲ್ಲಿ ಬಿಡಿಗಾಸು ಅನುದಾನವನ್ನು ತಂದಿಲ್ಲ ಎಂದರು.
ಹಿಂದೆ ಹರತಾಳು ಹಾಲಪ್ಪ ಅವರು ಎಂಎಸ್ಐಎಲ್ ಅಧ್ಯಕ್ಷರಾಗಿದ್ದಂತ ಸಂದರ್ಭದಲ್ಲಿ ಆ ನಿಗಮದಿಂದ ಸಾಗರ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ತಂದಿದ್ದರು. ಅದರಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ಸಾಗರದಲ್ಲಿ ನಡೆಸಿದ್ದರು. ಆದೇ ಹಾಲಿ ಶಾಸಕರು ಕ್ಯಾಬಿನೆಟ್ ದರ್ಜೆಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗದಮ ಅಧ್ಯಕ್ಷರಾಗಿದ್ದಾರೆ. ಆ ನಿಗಮದಿಂದಲೂ ಅನುದಾನ ತಂದು ಸಾಗರ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವಂತೆ ಆಗಲಿ ಎಂದು ಹೇಳಿದರು.
ಸಾಗರ ತಾಲ್ಲೂಕು, ನಗರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಗೋಕಳ್ಳ ಸಾಗಾಣಿಕೆ ಹೆಚ್ಚಾಗಿದೆ. ಮನೆಗಳ್ಳತನ ಹೆಚ್ಚಿದೆ. ಇವುಗಳನ್ನು ಪೊಲೀಸ್ ಇಲಾಖೆ ನಿಯಂತ್ರಿಸುವಂತ ಕೆಲಸ ಮಾಡುವಂತೆ ಆಗ್ರಹಿಸಿದರು.
ಸಾಗರ ನಗರದಲ್ಲಿ ನಡೆಯುತ್ತಿರುವಂತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಮಗೆ ತೃಪ್ತಿ ತಂದಿಲ್ಲ. ಈ ಬಗ್ಗೆ ಸದ್ಯದಲ್ಲೇ ಮಾಜಿ ಶಾಸಕ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಸಂಸ ಬಿವೈ ರಾಘವೇಂದ್ರ ಭೇಟಿಯಾಗಿ ಮಾಹಿತಿ ನೀಡಿ, ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿಯ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.
ಈ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಸದಸ್ಯರಾದಂತ ಮಧುರಾ ಶಿವಾನಂದ್, ಪ್ರೇಮಾ ಸಿಂಗ್, ಬಿಜೆಪಿ ಮುಖಂಡರಾದಂತ ರಮೇಶ್ ಹೆಚ್.ಎಸ್, ಸತೀಶ್.ಕೆ, ಸಂತೋಷ್ ಶೇಟ್, ಸಂತೋಷ್ ರಾಯಲ್, ಗೌತಮ್.ಕೆ.ಎಸ್ ಉಪಸ್ಥಿತರಿದ್ದರು.
ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಮರ ಬಿದ್ದು ಸೊರಬ-ಸಾಗರ ರಸ್ತೆ ಸಂಚಾರ ಬಂದ್: ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ
ಉರ್ದು ಭಾಷೆಗೆ ಸರ್ಕಾರ ಹೆಚ್ಚಿನ ಅನುದಾನ ಆರೋಪ: ಈ ಸ್ಪಷ್ಟನೆ ಕೊಟ್ಟ ಸಿಎಂ ಸಿದ್ಧರಾಮಯ್ಯ
BIG NEWS : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಚಾಟನೆ ಮಾಡಲಾಗಿದೆ : ಬಿವೈ ವಿಜಯೇಂದ್ರ ಫಸ್ಟ್ ರಿಯಾಕ್ಷನ್