ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡಲ್ಲ ಎಂದು ಪದೇಪದೇ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದು, ಈ ರೀತಿ ಪದೇಪದೇ ಹೇಳಿದರೆ ನೀವು ತಪ್ಪು ಮಾಡಿದ್ದೀರಿ ಎಂದು ಜನರಲ್ಲಿ ಭಾವನೆ ಮೂಡುತ್ತದೆ ಎಂದರು. ಇದೆ ವೇಳೆ ಸಿಎಂ ಪತ್ನಿ ಮುಗ್ದರು ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ತಾಯಿ ಎಂದೂ ಹೊರಬಂದವರಲ್ಲ. ಅವರು ಮುಗ್ದರು. ನೀವು ಈಗ ಅವರ ಸಹಿ ಹಾಕಿಸಿಕೊಂಡು ಅವರ ಹೆಸರಿನಲ್ಲಿ ಹಲವು ಸೈಟು ಮಾಡಿಸಿಕೊಂಡಿದ್ದೀರಿ. ಹೀಗಾಗಿ ಆ ತಾಯಿಗೆ ಯಾವುದೇ ತೊಂದರೆಯಾಗಬಾರದು ಎಂದು ನನ್ನ ಅಭಿಪ್ರಾಯ ಎಂದು ಈಶ್ವರಪ್ಪ ಹೇಳಿದ್ದಾರೆ.
ಈ ಹಿಂದೆ ನಾನು ಏನೂ ತಪ್ಪು ಮಾಡಿಲ್ಲ. ನನ್ನ ಮೇಲೆ ಎಫ್‌ಐಆರ್ ಹಾಕಲಾಯಿತು. ಕೊನೆಗೆ ತನಿಖೆಯಾಗಿ ಕ್ಲೀನ್ ಚಿಟ್ ಬಂತು. ಆಗ ನನ್ನ ರಾಜೀನಾಮೆಗೆ ಇದೇ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ನಿಮಗೊಂದು ಕಾನೂನು ನಮಗೊಂದು ಕಾನೂನಾ. ಅದೇ ರೀತಿ ನೀವೂ ಈಗ ಎಫ್‌ಐಆರ್ ದಾಖಲಾಗಿದ್ದರಿಂದ ರಾಜೀನಾಮೆ ಕೊಡಿ.ತನಿಖೆ ಬಳಿಕ ನಿರಪರಾಧಿ ಎಂದು ತಿಳಿದುಬಂದರೆ ಅಧಿಕಾರ ಪಡೆಯಿರಿ ಎಂದು ತಿಳಿಸಿದರು.