ನವದೆಹಲಿ : ಮಾಸ್ಕೋ ಬಗ್ಗೆ ಭಾರತ ಹೊಂದಿರುವ “ಅತ್ಯಂತ ಸ್ನೇಹಪರ ನಿಲುವು”ಗೆ ರಷ್ಯಾ ಕೃತಜ್ಞತೆ ಸಲ್ಲಿಸಿದೆ ಮತ್ತು ಉಕ್ರೇನ್ ಸಂಘರ್ಷದ ಬಗ್ಗೆ ನವದೆಹಲಿಯ ನಿಲುವನ್ನು ಶ್ಲಾಘಿಸಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಭೇಟಿಗೆ ಮುನ್ನ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಭಾರತವನ್ನ ಹೊಗಳಿದ್ದಾರೆ. ಅಮೆರಿಕದ ಒತ್ತಡದ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಮತ್ತು ಇಂಧನ ಖರೀದಿಯನ್ನ ಮುಂದುವರಿಸಿದ್ದರಿಂದ ಪೆಸ್ಕೋವ್ ಅವರ ಹೇಳಿಕೆ ಮಹತ್ವದ್ದಾಗಿದೆ.
ದ್ವಿಪಕ್ಷೀಯ ಸಂಬಂಧವು ಪರಸ್ಪರ ತಿಳುವಳಿಕೆ, ಪಾಲುದಾರಿಕೆ ಮತ್ತು ಜಾಗತಿಕ ವ್ಯವಹಾರಗಳ ಹಂಚಿಕೆಯ ದೃಷ್ಟಿಕೋನ ಮತ್ತು ಅಂತರರಾಷ್ಟ್ರೀಯ ಕಾನೂನು, ಕಾನೂನಿನ ನಿಯಮ ಮತ್ತು ಪರಸ್ಪರರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಆಧಾರಿತವಾದ ವ್ಯವಸ್ಥೆಯ ಆಳವಾದ ಐತಿಹಾಸಿಕ ಹಿನ್ನೆಲೆಯ ಮೇಲೆ ನಿಂತಿದೆ ಎಂದು ಪೆಸ್ಕೋವ್ ಹೇಳಿದರು.
“ಇದು ನಮ್ಮ ಸಂಬಂಧದ ಅತ್ಯಂತ ಪ್ರಮುಖ ಲಕ್ಷಣವಾಗಿದೆ. ನಮ್ಮ ಭಾರತೀಯ ಸ್ನೇಹಿತರ ಐತಿಹಾಸಿಕ ಬೆಳವಣಿಗೆಯ ಸಮಯದಲ್ಲಿ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಕ್ಕೆ ನಮಗೆ ಹೆಮ್ಮೆ ಇದೆ. ಇಂದಿನ ದಿನಗಳಲ್ಲಿ ನಮ್ಮ ದೇಶದ ಬಗ್ಗೆ ಅತ್ಯಂತ ಸ್ನೇಹಪರ ನಿಲುವುಗಾಗಿ ನಾವು ಭಾರತಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ” ಎಂದು ಅವರು ಹೇಳಿದರು.
BIG NEWS: ರಾಜ್ಯದಲ್ಲಿ ಯಾರು ಸಿಎಂ.? ಯಾರು ಡಿಸಿಎಂ ಸ್ಪಷ್ಟಪಡಿಸಿ: ನಿಖಿಲ್ ಕುಮಾರಸ್ವಾಮಿ
ಬಾರ್’ನಲ್ಲಿ’ಮದ್ಯ’ದ ಜೊತೆ ‘ಮಸಾಲಾ ಪಾಪಡ್’ ನೀಡುವುದ್ರ ಹಿಂದಿನ ರಹಸ್ಯವೇನು ಗೊತ್ತಾ.? ವೈನ್ ತಜ್ಞರ ಮಾತು ಕೇಳಿ!








