ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಒಡಿಶಾಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಎರಡು ದಿನಗಳ ಹಿಂದೆ ಜಿ7 ಶೃಂಗಸಭೆಗಾಗಿ ಕೆನಡಾಕ್ಕೆ ಹೋಗಿದ್ದೆ ಎಂದು ಹೇಳಿದರು. ನಂತರ “ಅಮೆರಿಕ ಅಧ್ಯಕ್ಷ ಟ್ರಂಪ್ ನನಗೆ ಕರೆ ಮಾಡಿ ನೀವು ಕೆನಡಾಕ್ಕೆ ಬಂದಿರುವುದರಿಂದ ವಾಷಿಂಗ್ಟನ್ ಮೂಲಕ ಹೋಗಬೇಕು. ನಾವು ಒಟ್ಟಿಗೆ ಊಟ ಮಾಡಿ ಮಾತನಾಡೋಣ ಬನ್ನಿ ಎಂದರು” ಅಂತಾ ಹೇಳಿದರು. ಆದ್ರೆ, ನಾನು ಅಮೆರಿಕ ಅಧ್ಯಕ್ಷರಿಗೆ ಆಹ್ವಾನಕ್ಕೆ ಧನ್ಯವಾದಗಳು ಎಂದು ಹೇಳಿದೆ. ಆದ್ರೆ ನಾನು ಮಹಾಪ್ರಭುಗಳ ಭೂಮಿಗೆ (ಒಡಿಶಾ) ಹೋಗಬೇಕು. ಅದಕ್ಕಾಗಿಯೇ ನಾನು ಅವರ ಆಹ್ವಾನವನ್ನ ನಯವಾಗಿ ನಿರಾಕರಿಸಿದೆ. ಮಹಾಪ್ರಭುಗಳ ಮೇಲಿನ ನಿಮ್ಮ ಪ್ರೀತಿ ಮತ್ತು ಭಕ್ತಿ ನನ್ನನ್ನು ಈ ಭೂಮಿಗೆ ಕರೆತಂದಿದೆ ಎಂದರು.
ಸ್ವಾತಂತ್ರ್ಯದ ನಂತ್ರದ ದಶಕಗಳ ಕಾಲ ಜನರು ದೇಶದಲ್ಲಿ ಕಾಂಗ್ರೆಸ್ ಮಾದರಿಯನ್ನ ನೋಡಿದರು, ಆದರೆ ಈ ಮಾದರಿಯಲ್ಲಿ ಉತ್ತಮ ಆಡಳಿತ ಅಥವಾ ಜನರ ಜೀವನ ಸುಲಭವಾಗಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡವು, ವಿಳಂಬವಾದವು ಮತ್ತು ದಾರಿ ತಪ್ಪಿಸಲ್ಪಟ್ಟವು, ವ್ಯಾಪಕ ಭ್ರಷ್ಟಾಚಾರವು ಕಾಂಗ್ರೆಸ್ ಅಭಿವೃದ್ಧಿ ಮಾದರಿಯ ವಿಶಿಷ್ಟ ಲಕ್ಷಣವಾಗಿತ್ತು, ಆದ್ರೆ ಈಗ ದೇಶವು ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಅಭಿವೃದ್ಧಿ ಮಾದರಿಯನ್ನ ವ್ಯಾಪಕವಾಗಿ ನೋಡುತ್ತಿದೆ. ಕಳೆದ ದಶಕದಲ್ಲಿ, ದೇಶದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರಗಳು ರಚನೆಯಾದ ಅನೇಕ ರಾಜ್ಯಗಳಿವೆ. ಈ ರಾಜ್ಯಗಳಲ್ಲಿ, ಸರ್ಕಾರ ಬದಲಾಗಿದೆ ಮಾತ್ರವಲ್ಲ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಹೊಸ ಯುಗವೂ ಪ್ರಾರಂಭವಾಗಿದೆ ಎಂದು ಹೇಳಿದರು.
#WATCH | Bhubaneswar, Odisha: "Just two days ago, I was in Canada for the G7 summit and the US President Trump called me. He said, since you have come to Canada, go via Washington, we will have dinner together and talk. He extended the invitation with great insistence. I told the… pic.twitter.com/MdLsiYnNCQ
— ANI (@ANI) June 20, 2025
ರಾಜ್ಯದ ‘ಆರ್ಯ ವೈಶ್ಯ ಸಮುದಾಯ’ವರಿಗೆ ಗುಡ್ ನ್ಯೂಸ್: ವಿವಿಧ ಸಾಲ-ಸೌಲಭ್ಯಕ್ಕೆ ಅರ್ಜಿಗಳ ಆಹ್ವಾನ
BREAKING : ಹಾವೇರಿ ವರದಾ ನದಿಯಲ್ಲಿ ಕಾಲು ಜಾರಿ ಬಿದ್ದು ವೃದ್ಧ ಸಾವು!
BREAKING : ನಟ ಶ್ರೀನಗರ ಕಿಟ್ಟಿ ನಿರ್ದೇಶಕರ ಹೇಳಿಕೆಯಿಂದ ತುಂಬಾ ಬೇಜಾರಾಗಿದೆ : ನಟಿ ರಚಿತಾ ರಾಮ್ ಫಸ್ಟ್ ರಿಯಾಕ್ಷನ್