ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಯುಗ ಆರಂಭವಾಗಿದ್ದು, ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ಸಿ. ಜೋಸೆಫ್ ವಿಜಯ್ (C. Joseph Vijay) ಅವರು ಇಂದು ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಚೆನ್ನೈನ ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
“ಸಿ. ಜೋಸೆಫ್ ವಿಜಯ್ ಎನ್ನುವ ನಾನು…” ಎಂದು ವಿಜಯ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಸಾವಿರಾರು ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ತಾರೆಯರ ಹಾರೈಕೆ: ವಿಜಯ್ ಅವರ ಈ ಐತಿಹಾಸಿಕ ಸಾಧನೆಗೆ ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ:
“ನನ್ನ ಸಹೋದರ ವಿಜಯ್ ಅವರ ನೇತೃತ್ವದಲ್ಲಿ ತಮಿಳುನಾಡು ಹೊಸ ಎತ್ತರಕ್ಕೆ ಬೆಳಗಲಿ” ಎಂದು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್. ಮಾಧವನ್: “ನಿಮ್ಮ ಅಧಿಕಾರಾವಧಿಯು ರಾಜ್ಯಕ್ಕೆ ಅತ್ಯಂತ ಪ್ರಭಾವಶಾಲಿಯಾಗಿರಲಿ, ನಿಮ್ಮ ಬಗ್ಗೆ ಹೆಮ್ಮೆಯಿದೆ ಸಹೋದರ” ಎಂದು ಇನ್ಸ್ಟಾಗ್ರಾಮ್‌ನಲ್ಲಿ ಹಾರೈಸಿದ್ದಾರೆ.
ಪ್ರಕಾಶ್ ರಾಜ್: “ನಿಮ್ಮ ಹೊಸ ಜವಾಬ್ದಾರಿಯಲ್ಲಿ ನೀವು ಯಶಸ್ವಿಯಾಗಿ, ರಾಜ್ಯವು ನಿಮ್ಮ ಆಡಳಿತದಲ್ಲಿ ಸಮೃದ್ಧವಾಗಲಿ” ಎಂದು ಶುಭ ಕೋರಿದ್ದಾರೆ.
ಇವರಲ್ಲದೆ ಶತ್ರುಘ್ನ ಸಿನ್ಹಾ, ಪವನ್ ಕಲ್ಯಾಣ್, ತ್ರಿಷಾ ಕೃಷ್ಣನ್ ಸೇರಿದಂತೆ ಹಲವರು ವಿಜಯ್‌ಗೆ ಶುಭ ಹಾರೈಸಿದ್ದಾರೆ.








