ನವದೆಹಲಿ : ದೆಹಲಿಯ ತಿಹಾರ್ ಜೈಲಿನಲ್ಲಿ ಉಪವಾಸ ಕೂತಿದ್ದ ಭಯೋತ್ಪಾದಕ ಯಾಸಿನ್ ಮಲಿಕ್ ರಕ್ತದೊತ್ತಡದಲ್ಲಿ ಏರುಪೇರಾದ ಪರಿಣಾಮ ದೆಹಲಿಯ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
“ಬಿಪಿ ಮಟ್ಟದಲ್ಲಿನ ಏರಿಳಿತದ ನಂತ್ರ ಆತನನ್ನ ಮಂಗಳವಾರ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.
ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (JKLF) ಮುಖ್ಯಸ್ಥ ಮಲಿಕ್ (56) ರುಬೈಯಾ ಸಯೀದ್ ಅಪಹರಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಮ್ಮು ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗಲು ಅವಕಾಶ ನೀಡಬೇಕು ಎಂಬ ಅವರ ಮನವಿಗೆ ಕೇಂದ್ರವು ಸ್ಪಂದಿಸದ ನಂತ್ರ ಶುಕ್ರವಾರ ಬೆಳಿಗ್ಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನ ಪ್ರಾರಂಭಿಸಿದ್ದ ಎನ್ನಲಾಗ್ತಿದೆ.
ಆಸ್ಪತ್ರೆಗೆ ಕರೆದೊಯ್ಯುವ ಮೊದಲು ತಿಹಾರ್ನ ಜೈಲು ಸಂಖ್ಯೆ 7ರಲ್ಲಿರುವ ಹೈ-ರಿಸ್ಕ್ ಸೆಲ್ನಲ್ಲಿ ಏಕಾಂತ ಬಂಧನದಲ್ಲಿದ್ದ ಕಾಶ್ಮೀರಾ ಪ್ರತ್ಯೇಕತಾವಾದಿಯನ್ನ ಜೈಲಿನ ವೈದ್ಯಕೀಯ ತನಿಖಾ (ಎಂಐ) ಕೊಠಡಿಗೆ ಸ್ಥಳಾಂತರಿಸಿ 4 ದ್ರವಗಳನ್ನ ನೀಡಲಾಗಿತ್ತು. ಸಧ್ಯ ಈ ಭಯೋತ್ಪಾದಕ, ಭಯೋತ್ಪಾದನೆಗೆ ಧನಸಹಾಯ ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.