ಚಿಕ್ಕಮಗಳೂರು : ಆಟೋ ಡಿಕ್ಕಿ ಆಗಿ ಸ್ಕೂಟಿಯಲ್ಲಿ ತೆರುಳುತ್ತಿದ್ದ ವೃದ್ಧ ಸಾವನ್ನಪ್ಪಿರುವ ಘಟನೆ ಚಿಕ್ಕಮಂಗಳೂರು ತಾಲೂಕಿನ ಕಬ್ಬಿಣ ಸೇತುವೆ ಗ್ರಾಮದ ಬಳಿ ಹೆದ್ದಾರಿಯಲ್ಲಿ ನಡೆದಿದೆ.
ಆಟೋ ಡಿಕ್ಕಿಯಾಗಿ ಉದ್ದೆಗೌಡ (68) ಎನ್ನುವ ವೃದ್ಧರು ಸ್ಥಳದಲ್ಲಿ ಸಾವನ್ನಪ್ಪಿದ್ದರೆ. ವೇಗವಾಗಿ ಬಂದಂತಹ ಆಟೋ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಆಟೋ ಚಾಲಕನನ್ನು ಸದ್ಯ ಪೋಲಿಸರ ವಶಕ್ಕೆ ಪಡೆದುಕೊಂಡಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








