ಬೆಂಗಳೂರು: ಬೆಂಗಳೂರು ಪೂರ್ವ ನಿಲ್ದಾಣದಲ್ಲಿನ ಕಾಮಗಾರಿಗಳ ಕಾರಣದಿಂದಾಗಿ, ಪ್ರಯಾಣಿಕರ ಸಂಚಾರಕ್ಕೆ ತಾತ್ಕಾಲಿಕವಾಗಿ ತಡೆಯನ್ನು ಮಾಡಲಾಗಿದೆ ಎಂಬುದಾಗಿ ನೈರುತ್ಯ ರೈಲ್ವೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಪೂರ್ವ ನಿಲ್ದಾಣವನ್ನು ಮಾರ್ಚ್ 13, 2025 ರಿಂದ ಪ್ರಯಾಣಿಕರ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಪ್ರಸ್ತುತ ಅಪ್ ಮತ್ತು ಡೌನ್ ಲೈನ್ ಪ್ಲಾಟ್ಫಾರ್ಮ್ಗಳನ್ನು ತೆಗೆದುಹಾಕಿ ಮೂರನೇ ಮತ್ತು ನಾಲ್ಕನೇ ಮಾರ್ಗಗಳಿಗೆ ಹೊಸ ಹಳಿಗಳನ್ನು ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿಗಳಿಂದಾಗಿ, ಮಾರ್ಚ್ 13, 2025 ರಿಂದ ಮುಂದಿನ ಸೂಚನೆಯವರೆಗೆ ಒಟ್ಟು 41 ರೈಲುಗಳ ನಿಲುಗಡೆಗಳನ್ನು ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತದೆ.
15 ಎಕ್ಸ್ ಪ್ರೆಸ್ ರೈಲುಗಳು:
1. ರೈಲು ಸಂಖ್ಯೆ 16522 ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ
2. ರೈಲು ಸಂಖ್ಯೆ 16021 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು
3. ರೈಲು ಸಂಖ್ಯೆ 16220 ತಿರುಪತಿ-ಚಾಮರಾಜನಗರ
4. ರೈಲು ಸಂಖ್ಯೆ 12657 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು
5. ರೈಲು ಸಂಖ್ಯೆ 16231 ಕಡಲೂರು ಪೋರ್ಟ್-ಮೈಸೂರು
6. ರೈಲು ಸಂಖ್ಯೆ 11301 ಸಿಎಸ್ಎಂಟಿ ಮುಂಬೈ-ಕೆಎಸ್ಆರ್ ಬೆಂಗಳೂರು
7. ರೈಲು ಸಂಖ್ಯೆ 16235 ತೂತುಕುಡಿ-ಮೈಸೂರು
8. ರೈಲು ಸಂಖ್ಯೆ 12785 ಕಾಚಿಗುಡ-ಮೈಸೂರು
9. ರೈಲು ಸಂಖ್ಯೆ 16525 ಕನ್ಯಾಕುಮಾರಿ–ಕೆಎಸ್ಆರ್ ಬೆಂಗಳೂರು
10. ರೈಲು ಸಂಖ್ಯೆ 16519 ಜೋಲಾರಪೆಟ್ಟೈ –ಕೆಎಸ್ಆರ್ ಬೆಂಗಳೂರು
11. ರೈಲು ಸಂಖ್ಯೆ 18463 ಭುವನೇಶ್ವರ–ಕೆಎಸ್ಆರ್ ಬೆಂಗಳೂರು
12. ರೈಲು ಸಂಖ್ಯೆ 12609 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್–ಮೈಸೂರು
13. ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್ ಟರ್ಮಿನಸ್–ಕೋಯಂಬತ್ತೂರು
14. ರೈಲು ಸಂಖ್ಯೆ 16521 ಬಂಗಾರಪೇಟೆ–ಕೆಎಸ್ಆರ್ ಬೆಂಗಳೂರು
15. ರೈಲು ಸಂಖ್ಯೆ 12577 ದರ್ಭಾಂಗ-ಮೈಸೂರು
26 ಪ್ಯಾಸೆಂಜರ್/ಮೆಮು ರೈಲುಗಳು:
1. ರೈಲು ಸಂಖ್ಯೆ 06595 ಕೆಎಸ್ಆರ್ ಬೆಂಗಳೂರು-ಧರ್ಮಾವರಂ
2. ರೈಲು ಸಂಖ್ಯೆ 66546 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ
3. ರೈಲು ಸಂಖ್ಯೆ 66581 ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ
4. ರೈಲು ಸಂಖ್ಯೆ 66511 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ
5. ರೈಲು ಸಂಖ್ಯೆ 66583 ಕೆಎಸ್ಆರ್ ಬೆಂಗಳೂರು-ಧರ್ಮಪುರಿ
6. ರೈಲು ಸಂಖ್ಯೆ 66556 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ
7. ರೈಲು ಸಂಖ್ಯೆ 66587 ಬೆಂಗಳೂರು ಕಂಟೋನ್ಮೆಂಟ್-ಕೋಲಾರ
8. ರೈಲು ಸಂಖ್ಯೆ 66591 ಕೆಎಸ್ಆರ್ ಬೆಂಗಳೂರು-ಕೋಲಾರ
9. ರೈಲು ಸಂಖ್ಯೆ 66559 ಕೆಎಸ್ಆರ್ ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ
10. ರೈಲು ಸಂಖ್ಯೆ 66550 ಕೆಎಸ್ಆರ್ ಬೆಂಗಳೂರು–ಜೋಲಾರಪೆಟ್ಟೈ
11. ರೈಲು ಸಂಖ್ಯೆ 66542 ಕೆಎಸ್ಆರ್ ಬೆಂಗಳೂರು–ವೈಟ್ ಫೀಲ್ಡ್
12. ರೈಲು ಸಂಖ್ಯೆ 66530 ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ
13. ರೈಲು ಸಂಖ್ಯೆ 66519 ಮಾರಿಕುಪ್ಪಂ–ಕೆಎಸ್ಆರ್ ಬೆಂಗಳೂರು
14. ರೈಲು ಸಂಖ್ಯೆ 66584 ಧರ್ಮಪುರಿ–ಕೆಎಸ್ಆರ್ ಬೆಂಗಳೂರು
15. ರೈಲು ಸಂಖ್ಯೆ 66555 ಮಾರಿಕುಪ್ಪಂ–ಕೆಎಸ್ಆರ್ ಬೆಂಗಳೂರು
16. ರೈಲು ಸಂಖ್ಯೆ 66529 ಕುಪ್ಪಂ–ಕೆಎಸ್ಆರ್ ಬೆಂಗಳೂರು
17. ರೈಲು ಸಂಖ್ಯೆ 66588 ಕೋಲಾರ-ಬೆಂಗಳೂರು ಕಂಟೋನ್ಮೆಂಟ್
18. ರೈಲು ಸಂಖ್ಯೆ 66512 ಮಾರಿಕುಪ್ಪಂ–ಕೆಎಸ್ಆರ್ ಬೆಂಗಳೂರು
19. ರೈಲು ಸಂಖ್ಯೆ 66545 ಮಾರಿಕುಪ್ಪಂ–ಕೆಎಸ್ಆರ್ ಬೆಂಗಳೂರು
20. ರೈಲು ಸಂಖ್ಯೆ 66543 ಕುಪ್ಪಂ–ಕೆಎಸ್ಆರ್ ಬೆಂಗಳೂರು
21. ರೈಲು ಸಂಖ್ಯೆ 66592 ಕೋಲಾರ-ಬೆಂಗಳೂರು ಕಂಟೋನ್ಮೆಂಟ್.
22. ರೈಲು ಸಂಖ್ಯೆ 66549 ಜೋಲಾರಪೆಟ್ಟೈ-ಕೆಎಸ್ಆರ್ ಬೆಂಗಳೂರು
23. ರೈಲು ಸಂಖ್ಯೆ 66582 ಬಂಗಾರಪೇಟೆ–ಕೆಎಸ್ಆರ್ ಬೆಂಗಳೂರು
24. ರೈಲು ಸಂಖ್ಯೆ 66560 ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ–ಕೆಎಸ್ಆರ್ ಬೆಂಗಳೂರು
25. ರೈಲು ಸಂಖ್ಯೆ 06596 ಧರ್ಮಾವರಂ–ಕೆಎಸ್ಆರ್ ಬೆಂಗಳೂರು
26. ರೈಲು ಸಂಖ್ಯೆ 66541 ವೈಟ್ ಫೀಲ್ಡ್–ಕೆಎಸ್ಆರ್ ಬೆಂಗಳೂರು
ಈ ಅವಧಿಯಲ್ಲಿ ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ಒಟ್ಟು 41 ರೈಲುಗಳು (15 ಎಕ್ಸ್ ಪ್ರೆಸ್ ರೈಲುಗಳು ಮತ್ತು 26 ಪ್ಯಾಸೆಂಜರ್/ಮೆಮು ರೈಲುಗಳು) ನಿಲುಗಡೆಯಾಗುವುದಿಲ್ಲ ಎಂಬುದಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BREAKING NEWS: ಕೋಲ್ಕತಾ ನೈಟ್ ರೈಡರ್ಸ್ ನಾಯಕನಾಗಿ ಅಜಿಂಕ್ಯ ರಹಾನೆ, ಉಪನಾಯಕರಾಗಿ ವೆಂಕಟೇಶ್ ಅಯ್ಯರ್ ಆಯ್ಕೆ
ಗಾಂಜಾ ಹೊಂದಿದ್ದ ಆರೋಪ: ಐಐಟಿ ಬಾಬಾ ಆಲಿಯಾಸ್ ಅಭಯ್ ಸಿಂಗ್ ಅರೆಸ್ಟ್ | IIT Baba Abhay Singh