ಮೈಸೂರು: ಜಾವಗಲ್‌ನಲ್ಲಿ ನಡೆಯುವ ವಾರ್ಷಿಕ ಉರುಸ್ ಹಬ್ಬಕ್ಕೆ ತೆರಳುವ ಭಕ್ತರ ಸಂಚಾರವನ್ನು ಸುಗಮಗೊಳಿಸುವ ಸಲುವಾಗಿ, ನೈಋತ್ಯ ರೈಲ್ವೆ 04.10.2025 ರಿಂದ 07.10.2025ರವರೆಗೆ ನಾಲ್ಕು ದಿನಗಳ ಕಾಲ ಬಾಣಾವರ ರೈಲು ನಿಲ್ದಾಣದಲ್ಲಿ ಕೆಳಕಂಡ ರೈಲುಗಳಿಗೆ ತಾತ್ಕಾಲಿಕ ನಿಲ್ದಾಣ ನೀಡಲು ತೀರ್ಮಾನಿಸಿದೆ. ರೈಲುಗಳ ಆಗಮನ ಮತ್ತು ನಿರ್ಗಮನ ವೇಳಾಪಟ್ಟಿಯ ವಿವರಗಳು ಹೀಗಿವೆ:
1. ರೈಲು ಸಂಖ್ಯೆ 56519 ಕೆಎಸ್‌ಆರ್ ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ ಬಾಣಾವರದಲ್ಲಿ ಬೆಳಿಗ್ಗೆ 08.35ಕ್ಕೆ ಆಗಮಿಸಿ 08.36ಕ್ಕೆ ನಿರ್ಗಮಿಸುತ್ತದೆ.
2. ರೈಲು ಸಂಖ್ಯೆ 16206 ಮೈಸೂರು – ತಾಳಗುಪ್ಪ ಇಂಟರ್‌ಸಿಟಿ ಬಾಣಾವರದಲ್ಲಿ ಬೆಳಿಗ್ಗೆ 09.07ಕ್ಕೆ ಆಗಮಿಸಿ 09.08ಕ್ಕೆ ನಿರ್ಗಮಿಸುತ್ತದೆ.
3. ರೈಲು ಸಂಖ್ಯೆ 17326 ಮೈಸೂರು – ಬೆಳಗಾವಿ ಎಕ್ಸ್‌ಪ್ರೆಸ್ ಬಾಣಾವರದಲ್ಲಿ ಬೆಳಿಗ್ಗೆ 11.32ಕ್ಕೆ ಆಗಮಿಸಿ 11.33ಕ್ಕೆ ನಿರ್ಗಮಿಸುತ್ತದೆ.
4. ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು – ಧಾರವಾಡ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬಾಣಾವರದಲ್ಲಿ ಮಧ್ಯಾಹ್ನ 15.38ಕ್ಕೆ ಆಗಮಿಸಿ 15.39ಕ್ಕೆ ನಿರ್ಗಮಿಸುತ್ತದೆ.
5. ರೈಲು ಸಂಖ್ಯೆ 12726 ಧಾರವಾಡ – ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬಾಣಾವರದಲ್ಲಿ ಬೆಳಿಗ್ಗೆ 10.29ಕ್ಕೆ ಆಗಮಿಸಿ 10.30ಕ್ಕೆ ನಿರ್ಗಮಿಸುತ್ತದೆ.
6. ರೈಲು ಸಂಖ್ಯೆ 17325 ಬೆಳಗಾವಿ – ಮೈಸೂರು ಎಕ್ಸ್‌ಪ್ರೆಸ್ ಬಾಣಾವರದಲ್ಲಿ ಮಧ್ಯಾಹ್ನ 13.55ಕ್ಕೆ ಆಗಮಿಸಿ 13.56ಕ್ಕೆ ನಿರ್ಗಮಿಸುತ್ತದೆ.
7. ರೈಲು ಸಂಖ್ಯೆ 16205 ತಾಳಗುಪ್ಪ – ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಬಾಣಾವರದಲ್ಲಿ ಸಂಜೆ 18.23ಕ್ಕೆ ಆಗಮಿಸಿ 18.24ಕ್ಕೆ ನಿರ್ಗಮಿಸುತ್ತದೆ.
8. ರೈಲು ಸಂಖ್ಯೆ 56520 ಹೊಸಪೇಟೆ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ಎಕ್ಸ್‌ಪ್ರೆಸ್ ಬಾಣಾವರದಲ್ಲಿ ಸಂಜೆ 18.43ಕ್ಕೆ ಆಗಮಿಸಿ 18.44ಕ್ಕೆ ನಿರ್ಗಮಿಸುತ್ತದೆ.
ಈ ತಾತ್ಕಾಲಿಕ ನಿಲುಗಡೆ ವ್ಯವಸ್ಥೆಯು ಜಾವಗಲ್‌ಗೆ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಪ್ರಯಾಣಿಸುವ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶವಾಗಿದೆ.