ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೋವಿಡ್ ಎಫೆಕ್ಟ್ನಿಂದಾಗಿ ದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಜನರು ಹಬ್ಬಗಳನ್ನು ಆಚರಿಸಿಲ್ಲ. ಈ ವರ್ಷ ಕೋವಿಡ್ನ ಪ್ರಭಾವ ಹೆಚ್ಚಿಲ್ಲದ ಕಾರಣ ಎಲ್ಲರೂ ಬಹಳ ಸಂತೋಷದಿಂದ ಹಬ್ಬಗಳನ್ನ ಆಚರಿಸುತ್ತಿದ್ದಾರೆ. ದೀಪಾವಳಿಯು ಕೆಡುಕಿನ ಮೇಲೆ ಒಳಿತಿನ ವಿಜಯವನ್ನ ಸೂಚಿಸುವ ಹಬ್ಬವಾಗಿದೆ. ಈ ಬಾರಿಯ ದೀಪಾವಳಿಯಂದು ದೇವಾಲಯಗಳು ತುಂಬಿ ತುಳುಕುತ್ತಿವೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದ ಭಕ್ತರಿಗೆ ಅರ್ಚಕರು ತೀರ್ಥಪ್ರಸಾದ ನೀಡುತ್ತಾರೆ. ಆದ್ರೆ, ಇಲ್ಲೊಂದು ದೇವಸ್ಥಾನದಲ್ಲಿ ಹಣ ಹಂಚುತ್ತಾರೆ. ಹೌದು, ಮಹಾರಾಷ್ಟ್ರದ ಅಮರಾವತಿಯಲ್ಲಿವ ದೇವಾಯದಲ್ಲಿ ವಿಶಿಷ್ಟ್ಯ ಆಚರಣೆ ಮಾಡಲಾಗ್ತಿದೆ.
ದೀಪಾವಳಿಯ ದಿನ ಭಕ್ತರಿಗೆ ಪ್ರಸಾದದ ಬದಲು ಹಣ ವಿತರಿಸಲಾಯ್ತು.!
ಮಹಾರಾಷ್ಟ್ರದ ಕಾಳಿಮಾತಾ ದೇವಸ್ಥಾನದಲ್ಲಿ ಈ ಆಚರಣೆ ನಡೆಯಿತು. ಪುರೋಹಿತ ಶಕ್ತಿ ಮಹಾರಾಜರು ಮಾತನಾಡಿ, ಹಬ್ಬದ ದಿನದಂದು ಹಣ ಹಂಚಿದ್ರೆ, ಭಕ್ತರಿಗೆ ಒಳಿತಾಗುತ್ತೆ ಅನ್ನೋ ನಂಬಿಕೆ ಇದೆ. ಈ ಆಚರಣೆಯನ್ನ 1984ರಲ್ಲಿ ಪ್ರಾರಂಭಿಸಲಾಯಿತು ಎಂದು ಶಕ್ತಿ ಮಹಾರಾಜ್ ಹೇಳಿದ್ದು, ಕೇವಲ ಅಮ್ಮನವರ ಆಶೀರ್ವಾದದಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದರು.
ಹತ್ತು ರೂಪಾಯಿ ನೋಟು ತುಂಬಿದ ಬಟ್ಟಲನ್ನ ಕಾಳಿ ದೇವಿಯ ಪಾದದ ಬಳಿ ಇಡಲಾಗುತ್ತದೆ. ಆ ಬಟ್ಟಲಿನಿಂದ ಅರ್ಚಕರು ದರ್ಶನಕ್ಕೆ ಬಂದ ಭಕ್ತರಿಗೆ ಎರಡು ಮೂರು ನೋಟುಗಳನ್ನ ಕೊಟ್ಟರು. ಸೋಮವಾರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ಈ ಪ್ರಸಾದವನ್ನ ಭಕ್ತರಿಗೆ ನೀಡಲಾಯಿತು. ದೇವಿಯ ಪಾದಕ್ಕೆ ಪ್ರಸಾದವನ್ನ ಪಡೆಯಲು ಭಕ್ತರ ದಂಡು ಹರಿದು ಬರುತ್ತಿದೆ. ಅದರೊಂದಿಗೆ ಅಲ್ಲಿನ ವಾತಾವರಣ ಗದ್ದಲದಿಂದ ಕೂಡಿತ್ತು. ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ದೇವಾಲಯವು ಹಿಂದೂ ಸ್ಮಶಾನದ ಸಮೀಪದಲ್ಲಿ ಹಳೆಯ ಕಾಳಿಮಾತಾ ದೇವಾಲಯವನ್ನು ಹೊಂದಿದೆ. ಇದನ್ನು 40 ವರ್ಷಗಳ ಹಿಂದೆ ನವೀಕರಿಸಲಾಗಿದೆ. ಶಕ್ತಿ ಮಹಾರಾಜರು ಈ ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿ ಮುಂದುವರಿದಿದ್ದಾರೆ. ಅಂದಿನಿಂದ ಈ ಹಣದ ಪ್ರಸಾದ ವಿತರಿಸಲಾಗುತ್ತಿದೆ ಎಂದರು. ದೀಪಾವಳಿಯ ದಿನ ಭಕ್ತರು ರಾತ್ರಿ ಹತ್ತು ಗಂಟೆಯ ಸುಮಾರಿಗೆ ದೇವಿಯ ದೇವಸ್ಥಾನಕ್ಕೆ ತೆರಳಿ ಲಕ್ಷ್ಮಿ ಪೂಜೆ ಮಾಡುತ್ತಾರೆ. ಈ ಪ್ರಸಾದವನ್ನ ದೇವಿಯು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀಡಿದ ಕೊಡುಗೆ ಎಂದು ಪರಿಗಣಿಸಲಾಗಿದೆ ಎಂದು ಭಕ್ತರು ಹೇಳಿದರು.