ಬೆಂಗಳೂರು : ಮಾರ್ಚ್ ತಿಂಗಳು ಶುರುವಾಗಿದ್ದು ಇನ್ನೂ ಎರಡು ತಿಂಗಳು ಕಾಲ ರಾಜ್ಯದಲ್ಲಿ ಭಾರಿ ತಾಪಮಾನ ಹೆರಿಗೆ ಆಗಲಿದೆ ತಾಪಮಾನದಲ್ಲಿ ಏರಿಕೆಯಾಗಿದ್ದು ರಾಜ್ಯದ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಹೌದು ರಾಜ್ಯಾದ್ಯಂತ ತೀವ್ರ ಶಾಖದ ಅಲೆ ಹೆಚ್ಚಾಗಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ದಾಖಲೆ ಮಟ್ಟಕ್ಕೇರಿದೆ. ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ರಾಜ್ಯಾದ್ಯಂತ ಹವಾಮಾನವು ಸಂಪೂರ್ಣ ಶುಷ್ಕವಾಗಿದ್ದು, ಬಿಸಿಲಿನ ಝಳ ತೀವ್ರವಾಗಿದೆ.
ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ‘ರೆಡ್ ಅಲರ್ಟ್’ ಮಾದರಿಯ ಪರಿಸ್ಥಿತಿ ಇದೆ. ಇಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ.ಇಂದು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ UV ಇಂಡೆಕ್ಸ್ 10+ ದಾಟುವ ನಿರೀಕ್ಷೆಯಿದೆ. ಇದು ನೇರವಾಗಿ ಚರ್ಮಕ್ಕೆ ತಗುಲಿದರೆ ಹಾನಿಕಾರಕ ಎಂದು ಹೇಳಲಾಗಿದೆ.
ಬೆಂಗಳೂರು ಮತ್ತು ಕರ್ನಾಟಕದ ಒಳನಾಡಿನಲ್ಲಿ ಬಿಸಿಲು ಮತ್ತು ಒಣ ವಾತಾವರಣದ ನಿರೀಕ್ಷೆ. ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಗರಿಷ್ಠ ತಾಪಮಾನ ಸಮೀಪಿಸುವ ಸಾಧ್ಯತೆ ಇದೆ.ಕರಾವಳಿ ಕರ್ನಾಟಕ (ಮಂಗಳೂರು/ಉಡುಪಿ)ದಲ್ಲಿ ಹೆಚ್ಚಾಗಿ ಬಿಸಿಲು ಮತ್ತು ಬಿಸಿಲಿನ ವಾತಾವರಣವಿದ್ದು, ಸುತ್ತಲೂ ಹೆಚ್ಚಿನ ಆರ್ದ್ರತೆ ಮತ್ತು ಗರಿಷ್ಠ ತಾಪಮಾನವಿರುತ್ತದೆ.








