ಬೆಂಗಳೂರು : ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿ. ಆರ್ ಫಾರ್ಮ್ ಹೌಸ್ ನಲ್ಲಿ ಇತ್ತೀಚಿಗೆ ರೇವ್ ಪಾರ್ಟಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತೆಲುಗು ನಟಿ ಹೇಮಾ ಹೊಸ ವಿಡಿಯೋದಲ್ಲಿ ಸ್ಪಷ್ಟನೇ ನೀಡಿದ್ದು, ಒಂದು ತಪ್ಪು ಸಮರ್ಥಿಸಿಕೊಳ್ಳಲು ಮತ್ತೊಂದು ತಪ್ಪು ಮಾಡಲ್ಲ ಎಂದು ತಿಳಿಸಿದ್ದಾರೆ.
ಅವರು ಮಾಡಿರುವ ಹೊಸ ವಿಡಿಯೋದಲ್ಲಿ ನನ್ನಿಂದಲೂ ತಪ್ಪಾಗಿದೆ ನಾನೇನು ದೇವರಲ್ಲ ಎಂದು ಹೊಸ ವಿಡಿಯೋದಲ್ಲಿ ತೆಲುಗು ನಟಿ ಹೇಮಾ ಹೇಳಿಕೆ ನೀಡಿದ್ದಾರೆ. ಯಾರು ಏನು ಬೇಕಾದರೂ ಉರ್ಕೊಳ್ಳಲಿ ತಪ್ಪು ಮಾಡದಿದ್ದರೆ ಯಾರಿಗೂ ಭಯಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ತಪ್ಪು ಮಾಡಿದ್ದೆ ಆದರೂ ನಾನು ದೇವರಲ್ಲ. ಒಂದು ತಪ್ಪು ಸಮರ್ಥಿಸಲು ಮತ್ತೊಂದು ತಪ್ಪು ಮಾಡಲ್ಲ ಎಂದು ಹೊಸ ವಿಡಿಯೋದಲ್ಲಿ ತೆಲುಗು ನಟಿ ಹೇಮಾ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಕೂಡ ಭಾಗಿಯಾಗಿದ್ದರು, ಈ ಕುರಿತಂತೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಕೂಡ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ನಟಿ ಹೇಮಾ ಅವರು ಹೊಸ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.